Latestದೇಶ-ವಿದೇಶರಾಜಕೀಯವೈರಲ್ ನ್ಯೂಸ್

25,400 ಕೋಟಿ ತೆರಿಗೆ ಪಾವತಿಸುವಂತೆ ರಿಲಯನ್ಸ್‌ ಗೆ ಕೇಂದ್ರ ಸರ್ಕಾರದಿಂದ ನೋಟಿಸ್‌..! ಸರ್ಕಾರಿ ಸ್ವಾಮ್ಯದ ಸ್ಥಾವರದಿಂದ ಅನಿಲ ಉತ್ಪಾದಿಸಿ ಮಾರಾಟ..!

354
Spread the love

ನ್ಯೂಸ್ ನಾಟೌಟ್: ಬರೋಬ್ಬರಿ 25,400 ಕೋಟಿ ರೂ. ತೆರಿಗೆ ಪಾವತಿಸುವಂತೆ ಮುಕೇಶ್‌ ಅಂಬಾನಿ ನೇತೃತ್ವದ ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ ಗೆ ಕೇಂದ್ರ ಸರ್ಕಾರ ನೋಟಿಸ್‌ ನೀಡಿದೆ.
ಆಂಧ್ರಪ್ರದೇಶದ ಕೃಷ್ಣಾ- ಗೋದಾ­ವರಿ ನದಿ ಪ್ರದೇಶದಲ್ಲಿರುವ ಸರ್ಕಾರಿ ಸ್ವಾಮ್ಯದ ಒಎನ್‌ ಜಿಸಿ ಸ್ಥಾವರದಿಂದ ನೈಸರ್ಗಿಕ ಅನಿಲವನ್ನು ಉತ್ಪಾದಿಸಿ, ಮಾರಾಟ ಮಾಡಿದ್ದಕ್ಕೆ ಈ ಕ್ರಮ ಕೈಗೊಂಡಿದೆ ಎನ್ನಲಾಗಿದೆ.

ಮತ್ತೊಂದು ತೈಲ ಕಂಪೆನಿಗೆ ಸೇರಿದ ಅನಿಲ ಸ್ಥಾವರ­ದಿಂದ ನೈಸರ್ಗಿಕ ಅನಿಲ ಉತ್ಪಾದಿಸಿ ಮಾರಾಟ ಮಾಡಿದರೆ ರಿಲಯನ್ಸ್‌ ಮತ್ತು ಬ್ರಿಟಿಷ್‌ ಪೆಟ್ರೋಲಿಯಂ ಕಂಪೆನಿ ಪರಿಹಾರ ನೀಡಬೇಕಾಗಿಲ್ಲ ಎಂಬ ಅಂತಾರಾ­ಷ್ಟ್ರೀಯ ನ್ಯಾಯಮಂಡಳಿಯೊಂದು ನೀಡಿದ್ದ ಆದೇಶ ರದ್ದುಗೊಳಿಸಿ ಫೆ.14ರಂದು ದಿಲ್ಲಿ ಹೈಕೋರ್ಟ್‌ ತೀರ್ಪು ನೀಡಿತ್ತು.

ತೀರ್ಪಿನ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ನೋಟಿಸ್‌ ನೀಡಿದೆ.
ಈ ನೈಸರ್ಗಿಕ ಅನಿಲ ನಿಕ್ಷೇಪಗಳಲ್ಲಿ ಕೆನಡಾದ ನಿಕೋ ಕಂಪೆನಿ ಷೇರುಗಳನ್ನು ರಿಲಯನ್ಸ್‌ ಹಾಗೂ ಬ್ರಿಟಿಷ್‌ ಕಂಪೆನಿ ಖರೀದಿಸಿದ್ದಕ್ಕೆ ಸಂಬಂಧಿಸಿದಂತೆ 2016ರಲ್ಲಿ ಈ ಬಗ್ಗೆ ರಿಲಯನ್ಸ್‌ ಗೆ ಕೇಂದ್ರ ತೆರಿಗೆ ಪಾವತಿಸಲು ಸೂಚನೆ ನೀಡಿತ್ತು. ಅದರ ವಿರುದ್ಧ ರಿಲಯನ್ಸ್‌ ದಾವೆ ಹೂಡಿತ್ತು. ಈಗ ಮತ್ತೆ ನೋಟಿಸ್ ನೀಡಲಾಗಿದೆ.

ಇದನ್ನೂ ಓದಿ:ಕೊಳಚೆ ಚರಂಡಿಗೆ ಇಳಿದು ಅಲ್ಲಿ ಸಿಲುಕಿ ಒದ್ದಾಡುತ್ತಿದ್ದ ಗೋವನ್ನು ರಕ್ಷಿಸಿದ ಹೃದಯವಂತ..! ವಿಡಿಯೋ ವೈರಲ್

See also  ಭ್ರೂಣ ದಂಧೆಯಲ್ಲಿ ಆರೋಗ್ಯ ಇಲಾಖೆಯ ಕೆಲವು ಅಧಿಕಾರಿಗಳೇ ಶಾಮೀಲು, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಫೋಟಕ ಹೇಳಿಕೆ
  Ad Widget   Ad Widget   Ad Widget   Ad Widget   Ad Widget   Ad Widget