ಪುತ್ತೂರು

ಮೂಡುಬಿದಿರೆ: ಅಣ್ಣನ ಮಗಳ ಮೇಲೆ ಅತ್ಯಾಚಾರವೆಸಗಿದ ಪಾಪಿ ಚಿಕ್ಕಪ್ಪ

1k

ಮೂಡುಬಿದಿರೆ: ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯ ಮೇಲೆ ಆಕೆಯ ಚಿಕ್ಕಪ್ಪನೇ ಅತ್ಯಾಚಾರವೆಸಗಿದ ಘಟನೆ ಸೋಮವಾರ ಮೂಡುಬಿದಿರೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ತೆಂಕಮಿಜಾರು ಗ್ರಾ.ಪಂ. ಪರಿಸರದ ಹೈಸ್ಕೂಲ್ ವಿದ್ಯಾರ್ಥಿನಿಯಾಗಿರುವ ಆಕೆ ತನ್ನ ಸ್ನೇಹಿತೆಯೊಂದಿಗೆ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಗುಡ್ಡ ಪ್ರದೇಶದಲ್ಲಿ ಆಕೆಯ ಚಿಕ್ಕಪ್ಪ ಕುಮಾರ್(30) ಎಂಬಾತ ಅಡ್ಡಗಟ್ಟಿ ವಿದ್ಯಾರ್ಥಿನಿಯರನ್ನು ಹೆದರಿಸಿದ್ದಾನೆ. ಆಗ ಜತೆಗಿದ್ದ ಇನ್ನೋರ್ವ ವಿದ್ಯಾರ್ಥಿನಿ ಹೆದರಿ ಓಡಿ ಹೋಗಿದ್ದಾಳೆ. ತನ್ನ ಅಣ್ಣನ ಮಗಳು ಎಂಬ ಕರುಣೆಯನ್ನೂ ತೋರದ ಆತ ಆಕೆಯನ್ನು ಅತ್ಯಾಚಾರ ನಡೆಸಿದ್ದಾನೆ. ಮೂಡುಬಿದಿರೆ ಪೊಲೀಸರು ಫೋಕ್ಸೋ ಕಾಯ್ದೆಯಡಿಯಲ್ಲಿ ಅತ್ಯಾಚಾರಿಯನ್ನು ಬಂಧಿಸಿದ್ದಾರೆ. ತನಿಖೆ ಪ್ರಗತಿಯಲ್ಲಿದೆ.

See also  ಪುತ್ತೂರು: ಏಕಕಾಲದಲ್ಲಿ 3000 ಫಲವೃಕ್ಷ ಸಸಿ ನಾಟಿ ಕಾರ್ಯಕ್ರಮ, 'ಪ್ರಕೃತಿಗೆ ಹಸಿರು ಹೊದಿಸಿ ಕಳಿಯಾಟ ಮಹೋತ್ಸವ'
  Ad Widget   Ad Widget   Ad Widget   Ad Widget   Ad Widget   Ad Widget   Ad Widget