ಕರಾವಳಿಪುತ್ತೂರುಸುಳ್ಯ

ನೆಲ್ಯಾಡಿಯ ರಕ್ಷಾ ಎಸ್‌. ‘ಗೋ ಫಸ್ಟ್‌’ ವಿಮಾನದಲ್ಲಿ ಗಗನಸಖಿಯಾಗಿ ನೇಮಕ

76
Spread the love

ನ್ಯೂಸ್‌ನಾಟೌಟ್‌: ಕಡಬ ತಾಲೂಕಿನ ಕೊಣಾಲು ಗ್ರಾಮದ ಆರ್ಲ ನಿವಾಸಿ ರಕ್ಷಾ ಎಸ್‌. ಅವರಿಗೆ ‘ಗೋ ಫಸ್ಟ್ ವಿಮಾನದಲ್ಲಿ ಗಗನಸಖಿಯಾಗಿ ಕಾರ್ಯನಿರ್ವಹಿಸುವ ಅವಕಾಶ ಲಭಿಸಿದೆ.

ಈಕೆ ಕೊಣಾಲು ಗ್ರಾಮದ ಆರ್ಲ ನಿವಾಸಿ, ಸುರಕ್ಷಾ ನಿಲಯದ ಸುಂದರ ಗೌಡ ಹಾಗೂ ರೇವತಿ ಸುಂದರ ದಂಪತಿಯ ಪುತ್ರಿ. ಗಗನಸಖಿ ನೇಮಕಾತಿಗೆ ಸಂಬಂಧಿಸಿದ ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡ ರಕ್ಷಾ ಬಳಿಕ ಬೆಂಗಳೂರಿನಲ್ಲಿ ನಡೆದ ಸಂದರ್ಶನಕ್ಕೆ ಹಾಜರಾಗಿ ಆಯ್ಕೆಗೊಂಡಿದ್ದರು. ಆ ಬಳಿಕ 6 ತಿಂಗಳ ತರಬೇತಿ ಮುಗಿಸಿ ಈಗ ಗೋ ಫಸ್ಟ್‌ ವಿಮಾನದಲ್ಲಿ ಗಗನಸಖಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನೆಲ್ಯಾಡಿ ಜ್ಞಾನೋದಯ ಬೆಥನಿ ಆಂಗ್ಲಮಾಧ್ಯಮ ಶಾಲೆಯಲ್ಲಿ ಪ್ರಾಥಮಿಕ, ಹೈಸ್ಕೂಲ್‌, ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಪಿಯುಸಿ ಹಾಗೂ ಮಂಗಳೂರಿನ ಸಂತ ಅಲೋಶಿಯಸ್‌ ಕಾಲೇಜಿನಲ್ಲಿ ಬಿಸಿಎ ಪದವಿ ವ್ಯಾಸಂಗ ಮುಗಿಸಿದ್ದಾರೆ. ಇವರು ಇವರ ಸಹೋದರ ರಕ್ಷಿತ್‌ ಎಸ್‌. ಕೆನಡಾದಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಇಂಜಿನಿಯರ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

See also  ಪುತ್ತೂರಿನಲ್ಲಿ ಬಿಜೆಪಿ ಮುಖಂಡರ‌ ಭಾವಚಿತ್ರಕ್ಕೆ ಚಪ್ಪಲಿ ಹಾರ ಪ್ರಕರಣ! ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಗೂಬೆ ಕೂರಿಸುವ ಯತ್ನ: ಶಾಸಕ ಅಶೋಕ್ ರೈ ಆರೋಪ!
  Ad Widget   Ad Widget   Ad Widget   Ad Widget