ನ್ಯೂಸ್ ನಾಟೌಟ್: ಸುಳ್ಯ ಭಾಗದಲ್ಲಿ ಇಳೆಗೆ ಮಳೆಯ ಸ್ಪರ್ಶವಾಯಿತು. ಮಳೆರಾಯನ ಆಗಮನಕ್ಕೆ ಕಾದು ಕೆಂಡದಂತಾಗಿದ್ದ ಭೂಮಿ ಸ್ವಲ್ಪ ಮಟ್ಟಿಗೆ ತಂಪಾಯಿತು.ಇಂದು ಮಧ್ಯಾಹ್ನದವರೆಗೆ ಉರಿ ಬಿಸಿಲಿದ್ದು,ಇದೀಗ ಮಳೆ ಸುರಿಯುತ್ತಿದೆ.
View this post on Instagram
ಬೆಳಗ್ಗಿನಿಂದ ಬಿಸಿಲ ಮಧ್ಯೆ ಮೋಡ ಕವಿದ ವಾತಾವರಣ ಕಂಡು ಬಂದಿದ್ದು,ಆಕಸ್ಮಿಕ ಮಳೆಯಿಂದಾಗಿ ದಿನನಿತ್ಯ ಕೆಲಸಕ್ಕೆ ಹೋಗುವ ಕಾರ್ಮಿಕರು ಹಾಗೂ ಆಫೀಸ್ ಕೆಲಸಕ್ಕೆಂದು ಹೊರಟವರು ಛತ್ರಿಯಿಲ್ಲದೇ ಸಮಸ್ಯೆಗೊಳಗಾದರು.ಇತ್ತ ರೈತರಂತು ಫುಲ್ ಖುಷ್ ಆದರು. ಉರಿಬಿಸಿಲಿಗೆ ಕಂಗಾಲಾಗಿದ್ದ ಜನ ಮಳೆರಾಯನ ಆಗಮನದಿಂದ ಕೊಂಚ ನಿರಾಳರಾದರು.ಇತ್ತ ಸುಳ್ಯದ ಕೆಲವೆಡೆ ಮಳೆ ಸುರಿದಿರುವ ಬಗ್ಗೆ ವರದಿಯಾಗಿದೆ.