ಕ್ರೈಂ

ಹುಚ್ಚು ನಾಯಿ ಕಡಿತ, ಗಾಯಗೊಂಡ ಬಾಲಕ, ನಾಯಿಯನ್ನು ಹೊಡೆದು ಕೊಂದ ಜನ

799

ಕಡಬ: ಬಾಲಕನೋರ್ವನಿಗೆ ಹುಚ್ಚುನಾಯಿ ಕಚ್ಚಿ ತೀವ್ರವಾಗಿ ಗಾಯಗೊಳಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಪೇಟೆಯಲ್ಲಿ ಬುಧವಾರ ಬೆಳಗ್ಗೆ ನಡೆದಿದೆ. ಗಾಯಾಳು ಬಾಲಕನನ್ನು ಇದೀಗ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಡಬ ನಿವಾಸಿ ಹಮೀದ್ ಎಂಬವರ ಪುತ್ರ ಅಫ್ನಾನ್ ಹುಚ್ಚುನಾಯಿಯ ಕಡಿತಕ್ಕೊಳಗಾದ ಬಾಲಕ ಎಂದು ಗುರುತಿಸಲಾಗಿದೆ.

ಹೇಗಾಯಿತು ಘಟನೆ?

ಮದ್ರಸ ಬಿಟ್ಟು ತೆರಳುತ್ತಿದ್ದ ವೇಳೆ ಹುಚ್ಚುನಾಯಿ ಏಕಾಏಕಿ ಬಾಲಕನ ಮೇಲೆ ಎರಗಿದ್ದು, ಕೈಗೆ ಕಚ್ಚಿ ತೀವ್ರವಾಗಿ ಗಾಯಗೊಳಿಸಿದೆ ಎನ್ನಲಾಗಿದೆ. ಘಟನೆಯ ವೇಳೆ ಬಾಲಕನನ್ನು ಕಡಬ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ತಕ್ಷಣವೇ ಮಂಗಳೂರು ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ತಿಳಿದು ಬಂದಿದೆ. ಇನ್ನೂ ಹುಚ್ಚುನಾಯಿಯನ್ನು ಸ್ಥಳೀಯರು ಹೊಡೆದು ಕೊಂದು ಹಾಕಿದ್ದಾರೆ.

ವಾರ ಹಿಂದೆ ಕಡಬದ ಹಳೆ ಸ್ಟೇಷನ್ ಸಮೀಪದ ಬಾಪೂಜಿ ನಗರದಲ್ಲಿ ಕೂಡ ಹುಚ್ಚುನಾಯಿ ಹಾವಳಿ ಕಂಡು ಬಂದಿತ್ತು. ಈ ನಡುವೆ ಬೀದಿ ನಾಯಿಗಳನ್ನು ನಿಯಂತ್ರಿಸುವ ಕೆಲಸವನ್ನು ಮಾಡಬೇಕು. ಹುಚ್ಚುನಾಯಿಗಳ ಕಾಟದಿಂದ ಯಾರು ಕೂಡ ಧೈರ್ಯವಾಗಿ ಹೊರ ಹೋಗಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗುತ್ತಿದೆ ಎನ್ನುವ ಆಕ್ರೋಶದ ಮಾತುಗಳು ಕೇಳಿ ಬಂದಿವೆ.

See also  ತುಂಬಿದ ಸಭೆಯಲ್ಲಿ ತನ್ನ 'ಎದೆ' ಪ್ರದರ್ಶಿಸಿ ಅನುಚಿತವಾಗಿ ವರ್ತಿಸಿದ ಯುವತಿ..! ಯುವತಿಯನ್ನು ಕಾರ್ಯಕ್ರಮದಿಂದ ಹೊರ ಹಾಕಿದ ಆಯೋಜಕರು..!
  Ad Widget   Ad Widget   Ad Widget   Ad Widget   Ad Widget   Ad Widget   Ad Widget