ಕ್ರೈಂ

ಅತ್ತಿಗೆಯ ಮೇಲೆ ನಾಡ ಬಂದೂಕಿನಲ್ಲಿ ಗುಂಡು ಹಾರಿಸಿದ ಮೈದುನ

479
Spread the love

ಪುತ್ತೂರು: ಜಾಗದ ತಕರಾರಿನಲ್ಲಿ ಮಾತಿನ ಚಕಮಕಿ ನಡೆದು ಮೈದುನನೇ ಅತ್ತಿಗೆಯ ಮೇಲೆ ನಾಡ ಬಂದೂಕಿನಲ್ಲಿ ಗುಂಡು ಹಾರಿಸಿ ಕೊಲ್ಲಲು ಯತ್ನಿಸಿದ ಬಗ್ಗೆ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪುತ್ತೂರು ತಾಲೂಕಿನ ಶಾಂತಿಗೋಡು ಗ್ರಾಮದ ವೀರಮಂಗಲ ಕೊಯಕುಡೆ ಎಂಬಲ್ಲಿ ಘಟನೆ ನಡೆದಿದೆ.

ಏನಿದು ಪ್ರಕರಣ?

ದರ್ನಮ್ಮ(54), ಆಕೆಯ ಗಂಡ ಬಾಬು ಗೌಡ ಮತ್ತು ಅವರ ಮಗ ರವಿ ತಮ್ಮ ಮನೆಯ ಬಳಿಯ ಜಮೀನಿನಲ್ಲಿ ತೊಂಡೆಕಾಯಿ ಬಳ್ಳಿಗೆ ಚಪ್ಪರ ಹಾಕುತ್ತಿದ್ದಾಗ, ಅತ್ತಿಗೆಯ ಬಳಿ ಬಂದ ಮೈದುನ ದೇವಪ್ಪ ಗೌಡ ತನ್ನ ಬಂದೂಕು ಹಿಡಿದು ಬೆದರಿಸಿದ್ದಾನೆ. ಅಲ್ಲದೆ, ಮಹಿಳೆಯನ್ನು ಉದ್ದೇಶಿಸಿ ಈ ಜಾಗ ನನಗೆ ಸೇರಿದ್ದು, ಇಲ್ಲಿ ನೀವು ಏನಾದರೂ ಬೆಳೆದರೆ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಹೇಳಿ ಕೈಯಲ್ಲಿದ್ದ ನಾಡ ಬಂದೂಕಿನಲ್ಲಿ ಗುಂಡು ಹಾರಿಸಿದ್ದಾನೆ.

See also  ಕಾಣೆಯಾಗಿದ್ದ ಬೆಳ್ಳಾರೆಯ ವಿವಾಹಿತೆ ಮೈಸೂರಿನಲ್ಲಿ ಪತ್ತೆ
  Ad Widget   Ad Widget   Ad Widget   Ad Widget   Ad Widget   Ad Widget