ಕ್ರೈಂ

ಹೃದಯಾಘಾತದಿಂದ ನಟ ಪುನೀತ್ ರಾಜ್ ಕುಮಾರ್ ನಿಧನ

490
Spread the love

ಬೆಂಗಳೂರು: ಯಾರೂ ನಿರೀಕ್ಷಿಸದ ಘಟನೆ ನಡೆದು ಬಿಟ್ಟಿದೆ. ತೀವ್ರ ಹೃದಯಾಘಾತಕ್ಕೆ ಒಳಗಾಗಿ ಬೆಂಗಳೂರಿನ ವಿಕ್ರಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪುನೀತ್ ರಾಜ್ ಕುಮಾರ್ ಶುಕ್ರವಾರ ನಿಧನರಾಗಿದ್ದಾರೆ. ಅವರಿಗೆ 46 ವರ್ಷ ವಯಸ್ಸಾಗಿತ್ತು. ಶುಕ್ರವಾರ ಬೆಳಗ್ಗೆ 11 ಗಂಟೆಗೆ ಅವರಿಗೆ ಹೃದಯಾಘಾತವಾಗಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಜ್ಞ ವೈದ್ಯರ ತಂಡ ಅವರನ್ನು ಬದುಕಿಸುವುದಕ್ಕೆ ಸತತ ಪ್ರಯತ್ನ ನಡೆಸಿದ್ದರು. ಆದರೆ ಲಕ್ಷಾಂತರ ಅಭಿಮಾನಿಗಳ ಹಾರೈಕೆ ಫಲಿಸಲಿಲ್ಲ. ಚಿಕಿತ್ಸೆಗೆ ಸ್ಪಂದಿಸದ ಪುನೀತ್ ನಿಧನರಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಗುರುವಾರ ರಾತ್ರಿಯೇ ಅವರಿಗೆ ಎದೆ ಸಂಬಂಧಿತ ನೋವು ಕಾಣಿಸಿಕೊಂಡಿತ್ತು. ಆದರೆ ಅದನ್ನು ನಿರ್ಲಕ್ಷಿಸಿದ ಪುನೀತ್ ಶುಕ್ರವಾರ ಬೆಳಗ್ಗೆ ಜಿಮ್ ಗೆ ಹೋಗಿದ್ದರು ಎನ್ನಲಾಗಿದೆ.

ಜನಮನ ಗೆದ್ದ ನಟ

ವರನಟ ಡಾ, ರಾಜ್ ಕುಮಾರ್ ಪುತ್ರ ಪುನೀತ್ ಬಾಲ್ಯದಿಂದಲೂ ನಟನಾಗಿ ಜನರ ಮನಸ್ಸನ್ನು ಗೆದ್ದವರು. ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದವರು. ಅಪ್ಪು ಸಿನಿಮಾದ ಮೂಲಕವಾಗಿ ಹಿಟ್‌ ಸಿನಿಮಾ ನೀಡಿದ ಪುನೀತ್ ತಂದೆಗೆ ತಕ್ಕ ಮಗ ಅನ್ನುವುದನ್ನು ನಿರೂಪಿಸಿ ತೋರಿಸಿದ್ದರು. ನಟನೆ, ಡ್ಯಾನ್ಸಿಂಗ್, ಫೈಟಿಂಗ್ ನಿಂದ ತನ್ನ ಅಭಿಮಾನಿ ಬಳಗವನ್ನು ಸೃಷ್ಟಿಸಿದ್ದರು. ಒಟ್ಟು 29 ಸಿನಿಮಾಗಳಲ್ಲಿ ಪುನೀತ್‌ ನಟಿಸಿದ್ದಾರೆ.

See also  ದೇಗುಲದ ಬಳಿ ಹ್ಯಾಂಡ್ ಪಂಪ್‌ ನಲ್ಲಿ ನೀರು ಕುಡಿದ ದಲಿತ ವಿದ್ಯಾರ್ಥಿಗೆ ಥಳಿತ..! 7 ಮಂದಿ ವಿರುದ್ಧ ಎಫ್.ಐ.ಆರ್..!
  Ad Widget   Ad Widget   Ad Widget   Ad Widget   Ad Widget   Ad Widget