ಕ್ರೈಂ

ವಿಷ ಸೇವಿಸಿದ್ದ ಮರ್ಕಂಜದ ಪಿಯುಸಿ ವಿದ್ಯಾರ್ಥಿನಿ ಸಾವು

346
Spread the love

ಸುಳ್ಯ : ವಿಷ ಸೇವಿಸಿ ವಾರದ ಹಿಂದೆ ತೀವ್ರ ಅಸ್ವಸ್ಥಳಾಗಿ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದ ಪಿ.ಯು.ಸಿ. ವಿದ್ಯಾರ್ಥಿನಿ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಘಟನೆ ವರದಿಯಾಗಿದೆ.

ಮರ್ಕಂಜ ಗ್ರಾಮದ ಬೇರಿಕೆ ರಮೇಶ ಎಂಬವರ ಪುತ್ರಿ ಶ್ರಾವ್ಯ (17 ವ) ಎಂಬಾಕೆಯೆ ಸಾವನ್ನಪ್ಪಿದ ವಿದ್ಯಾರ್ಥಿನಿ. ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಈಕೆ‌ ವಾರದ ಹಿಂದೆ ಮರ್ಕಂಜದ ಮನೆಗೆ ಬಂದಿದ್ದಳು. ಮನೆಯಲ್ಲಿ ಯಾರು ಇಲ್ಲದ ವೇಳೆ ಇಲಿಪಾಷಣ ಸೇವಿಸಿದ್ದಳೆಂದು ತಿಳಿದು ಬಂದಿದೆ. ಮನೆಯವರಿಗೆ ವಿಷಯ ತಿಳಿದು ಆಕೆಯನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಆಕೆ ನಿನ್ನೆ (ಫೆ.20) ಕೊನೆಯುಸಿರೆಳೆದಳೆಂದು ತಿಳಿದು ಬಂದಿದೆ. ಕಲಿಕೆ ಕಷ್ಟವಾಗುತ್ತಿದೆ ಎಂಬ ಕಾರಣಕ್ಕೆ ಇಲಿ ಪಾಷಾಣ ಸೇವಿಸಿರುವುದಾಗಿ ಆಕೆ ಹೇಳಿಕೊಂಡಿರುವುದಾಗಿ ತಿಳಿದುಬಂದಿದೆ.

ಮೃತಳು ತಂದೆ, ತಾಯಿ ವಿದ್ಯಾ, ಸಹೋದರ ಶ್ರೇಯಸ್ ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.

See also  ನಟ ದರ್ಶನ್ ಗೆ ಮಧ್ಯಂತರ ಜಾಮೀನು ಮಂಜೂರು..! ದಾಸನಿಗೆ ದೀಪಾವಳಿ ಗಿಫ್ಟ್..?
  Ad Widget   Ad Widget   Ad Widget   Ad Widget   Ad Widget   Ad Widget