ಕ್ರೈಂ

ಹಿಂದೂ ಹೆಸರಿನಲ್ಲಿ ಬಳೆ ಮಾರುತ್ತಿದ್ದ ಮುಸ್ಲಿಂ ವ್ಯಕ್ತಿಗೆ ಹಿಗ್ಗಾಮುಗ್ಗಾ ಥಳಿತ..!

631
Spread the love

ಇಂದೋರ್: ಬಳೆ ಮಾರುತ್ತಿದ್ದ 25 ವರ್ಷದ ವ್ಯಕ್ತಿಯನ್ನು ಅಪರಿಚಿತ ಗುಂಪೊಂದು ಸಾರ್ವಜನಿಕವಾಗಿ ಥಳಿಸಿ, ಹತ್ತು ಸಾವಿರ ರೂ. ಕದ್ದೊಯ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇಂದೋರ್ ನ ಬಾನ್ಗಂಗಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ.ಬಳೆ ಮಾರುತ್ತಿದ್ದ ಮುಸ್ಲಿಂ ವ್ಯಕ್ತಿ ತನ್ನ ವ್ಯಾಪಾರಕ್ಕಾಗಿ ಹಿಂದೂ ಹೆಸರು ಇಟ್ಟುಕೊಂಡಿದ್ದ, ಆತನ ಬಳಿ ಬೇರೆ ಬೇರೆ ಹೆಸರಿನಲ್ಲಿ 2 ಆಧಾರ್ ಕಾರ್ಡ್ ಲಭ್ಯವಾಗಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ದುಷ್ಕರ್ಮಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೆ ಜನರು ಕೋಮು ದ್ವೇಷ ಹರಡುವ ಪೋಸ್ಟ್‌ಗಳನ್ನು ಹಂಚಬಾರದು ಎಂದು ಸೂಚಿಸಿದ್ದಾರೆ. ಬಳೆ ಮಾರುತ್ತಿದ್ದಾಗ ಬಂದ ಗುಂಪೊಂದು ನನ್ನ ಹೆಸರನ್ನು ಕೇಳಿ ಥಳಿಸಲು ಆರಂಭಿಸಿದರು. ಬಳೆಗಳು ಸೇರಿದಂತೆ ಇತರ ವಸ್ತುಗಳನ್ನು ನಾಶ ಮಾಡಿದ್ದಾರೆ ಮತ್ತು ನನ್ನ ಬಳಿ ಇದ್ದ 10 ಸಾವಿರ ರೂ. ಕದ್ದುಕೊಂಡು ಹೋಗಿದ್ದಾರೆ’ ಎಂದು ಹಲ್ಲೆಗೊಳಗಾದ ವ್ಯಕ್ತಿ ಹೇಳಿದ್ದಾರೆ.

See also  ಪರಿಹಾರ ಕೊಡದಕ್ಕೆ KSRTC ಬಸ್ ಜಪ್ತಿ ಮಾಡಿಸಿದ ನ್ಯಾಯಾಲಯ..! ಸರ್ಕಾರಿ ಬಸ್ ಅನ್ನು ನ್ಯಾಯಾಲಯದ ಆವರಣದಲ್ಲಿ ತಂದು ನಿಲ್ಲಿಸಿದ ಸಿಬ್ಬಂದಿ..!
  Ad Widget   Ad Widget   Ad Widget   Ad Widget   Ad Widget   Ad Widget