ಸುಳ್ಯ

ಸುಳ್ಯ: ಕೆ.ವಿ.ಜಿ. ಕಾನೂನು ಕಾಲೇಜಿಗೆ ಆಡಳಿತಾಧಿಕಾರಿ ನೇಮಕ, ಪ್ರೊ ಕೆ.ವಿ. ದಾಮೋದರ ಗೌಡ ಅವರಿಗೆ ಹೊಸ ಜವಾಬ್ದಾರಿ

190

ನ್ಯೂಸ್ ನಾಟೌಟ್‌: ಸುಳ್ಯದ ಕೆ.ವಿ.ಜಿ. ಕಾನೂನು ಕಾಲೇಜಿನ ಆಡಳಿತಾಧಿಕಾರಿಯಾಗಿ ನಿವೃತ್ತ ಪ್ರಾಂಶುಪಾಲ ಪ್ರೊ. ಕೆ.ವಿ. ದಾಮೋದರ ಗೌಡ ಅವರನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ.) ಸುಳ್ಯ ನೇಮಕಗೊಳಿಸಿದೆ.

ಎಒಎಲ್‌ಇ ಅಧ್ಯಕ್ಷ ಡಾ. ಕೆ.ವಿ. ಚಿದಾನಂದ ಅವರು ಅಧಿಕಾರ ಪತ್ರವನ್ನು ಹಸ್ತಾಂತರಿಸಿ ಶುಭಾಶಯ ಸಲ್ಲಿಸಿದರು. ಈ ಸಂದರ್ಭ ಎಒಎಲ್‌ಇ ಉಪಾಧ್ಯಕ್ಷೆ ಶೋಭಾ ಚಿದಾನಂದ, ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ.. ಕಾರ್ಯದರ್ಶಿ ಹೇಮನಾಥ ಕೆ.ವಿ. ಆಡಳಿತ ಮಂಡಳಿ ಸದಸ್ಯರಾದ ಜಗದೀಶ್ ಎ.ಎಚ್, ಕೆವಿಜಿ ಕಾನೂನು ಕಾಲೇಜಿನ ಪ್ರಾಂಶುಪಾಲ ಬಿ. ಉದಯಕೃಷ್ಣ, ಎನ್ನೆಂಸಿ ಆಡಳಿತಾಧಿಕಾರಿ ಚಂದ್ರಶೇಖರ ಪೇರಾಲು, ಎನ್.ಎಂ.ಪಿ.ಯು ಪ್ರಾಂಶುಪಾಲೆ ಮಿಥಾಲಿ ರೈ ಉಪಸ್ಥಿತರಿದ್ದು ಶುಭಹಾರೈಸಿದರು. ರಜತ್ ಅಡ್ಕಾರ್ ಹಾಗೂ ಕಾಲೇಜಿನ ಉಪನ್ಯಾಸಕ ವರ್ಗ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

See also  ಸುಳ್ಯ: ಮಲಗಿದ್ದ ಅಪರಿಚಿತ ವ್ಯಕ್ತಿಯ ಮೇಲೆ ಹತ್ತಿದ ವಾಹನ, ಗಂಭೀರ ಗಾಯ, ಆಸ್ಪತ್ರೆಗೆ ದಾಖಲು
  Ad Widget     Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget