ಕ್ರೀಡೆ/ಸಿನಿಮಾ

ಇಂದಿನಿಂದ ಪ್ರೋ ಕಬಡ್ಡಿ: ಯು ಮುಂಬಾ ತಂಡದಲ್ಲಿ ಐವರ್ನಾಡಿನ ಸಚಿನ್ ಪ್ರತಾಪ್

655

ಸುಳ್ಯ: ಇಂದಿನಿಂದ ಪ್ರೋ ಕಬಡ್ಡಿ ಕೂಟ ಆರಂಭವಾಗುತ್ತಿದೆ. ಇಂದು ನಡೆಯಲಿರುವ ಆತಿಥೇಯ ಬೆಂಗಳೂರು ಬುಲ್ಸ್ ಹಾಗೂ ಯು ಮುಂಬಾ ತಂಡಗಳ ನಡುವಿನ ಕದನ ಕುತೂಹಲ ಕೆರಳಿಸಿದೆ. ವಿಶೇಷವೆಂದರೆ ಯು ಮುಂಬಾ ತಂಡದಲ್ಲಿ ಐವರ್ನಾಡಿನ ಗ್ರಾಮೀಣ ಪ್ರತಿಭೆ ಸಚಿನ್ ಪ್ರತಾಪ್ ಆಯ್ಕೆಯಾಗಿದ್ದಾರೆ. SDM ಉಜಿರೆ ತಂಡದಲ್ಲಿ ಮುಖ್ಯ ಆಟಗಾರನಾಗಿ ಹಲವಾರು ಪಂದ್ಯಾವಳಿಯಲ್ಲಿ ತನ್ನ ಸಾಮರ್ಥ್ಯ ಸಾಬೀತು ಪಡಿಸಿರುವ ಪ್ರತಾಪ್ ಇದೀಗ ದೊಡ್ಡ ಅವಕಾಶದತ್ತ ಮುಖ ಮಾಡಿದ್ದಾರೆ.

ಬಯೋ ಬಬಲ್ ನಲ್ಲಿ ಟೂರ್ನಿ

ಕೋವಿಡ್ ಕಾರಣ ಬಯೋಬಬಲ್ ನಲ್ಲಿ ಟೂರ್ನಿಯು ವೈಟ್ ಫೀಲ್ಡ್ ನಲ್ಲಿರುವ ಶೆರಟಾನ್ ಗ್ರ್ಯಾಂಡ್ ಹೊಟೇಲ್ ಸಭಾಂಗಣದಲ್ಲಿ  ನಿಗದಿಯಾಗಿದೆ. 12 ತಂಡಗಳು ಟೂರ್ನಿಗೆ ಪ್ರೇಕ್ಷಕರಿಗೆ ಅವಕಾಶ ಕಲ್ಪಿಸಲಾಗಿಲ್ಲ. ಮಶಾಲ್ ಸ್ಪೋರ್ಟ್ಸ್ ಆಯೋಜಿಸುತ್ತಿರುವ ಟೂರ್ನಿಯಲ್ಲಿ ರೌಂಡ್ ರಾಬಿನ್ ಮಾದರಿಯಲ್ಲಿ ಪಂದ್ಯಗಳು ನಡೆಯಲಿವೆ.

ಟೂರ್ನಿಯ ಮೊದಲು ನಾಲ್ಕು ದಿನಗಳು ‘ಟ್ರಿಪಲ್ ಹೆಡರ್’ (ಪ್ರತಿದಿನ ಮೂರು ಪಂದ್ಯಗಳು) ನಡೆಯಲಿದ್ದು, ಬಳಿಕ ಪ್ರತಿ ಶನಿವಾರ ಮೂರು ಪಂದ್ಯಗಳು ಆಯೋಜನೆಯಾಗಲಿವೆ. ಸೆಮಿಫೈನಲ್ ಮತ್ತು ಫೈನಲ್ ಸೇರಿ ಒಟ್ಟು 137 ಪಂದ್ಯಗಳು ನಡೆಯಲಿದ್ದು, ಸದ್ಯ 66 ಪಂದ್ಯಗಳ ವೇಳಾಪಟ್ಟಿಯನ್ನು ಮಾತ್ರ ಬಿಡುಗಡೆ ಮಾಡಲಾಗಿದೆ. ಮೊದಲಾರ್ಧದ ಪಂದ್ಯಗಳು ಜನವರಿ 20ವರೆಗೆ ನಡಯಲಿವೆ. ಬೆಂಗಳೂರು ಬುಲ್ಸ್ ಗೆ ಈ ಬಾರಿ ಸ್ಟಾರ್ ರೈಡರ್ ಪವನ್ ಕುಮಾರ್ ಸೆಹ್ರಾವತ್ ನಾಯಕನಾಗಿದ್ದು, ಹೊಸ ಹುರುಪಿನೊಂದಿಗೆ ಟೂರ್ನಿಗೆ ಸಜ್ಜಾಗಿದೆ.

See also  'ಐಶ್ವರ್ಯಾ ರೈ ಮದುವೆಯಾದ್ರೆ ಸುಂದರವಾದ ಮಕ್ಕಳಾಗುತ್ತವೆಂದು ಭಾವಿಸಿದ್ರೆ ಸಾಧ್ಯವಾಗದ ಮಾತು' ಪಾಕ್‌ ಮಾಜಿ ಕ್ರಿಕೆಟಿಗ ಹೀಗೆ ಹೇಳಿದ್ಯಾಕೆ?ಅಸಹ್ಯಕರ ಕಾಮೆಂಟ್‌ಗೆ ನೆಟ್ಟಿಗರು ಏನಂದ್ರು?
  Ad Widget   Ad Widget   Ad Widget   Ad Widget   Ad Widget   Ad Widget   Ad Widget