Latest

ಶೌಚಾಲಯದಲ್ಲಿರುವ ಕನ್ನಡಿಯಿಂದ ಕಾಲೇಜ್‌ಗೆ ಸಮಸ್ಯೆ!!ಪ್ರಿನ್ಸಿಪಾಲರ ಈ ನಿರ್ಧಾರಕ್ಕೆ ಭಾರಿ ಮೆಚ್ಚುಗೆ!ಶೌಚಾಲಯದ ಒಂದು ಕನ್ನಡಿ ಕಥೆ !!

568
Spread the love

ನ್ಯೂಸ್‌ ನಾಟೌಟ್: ಕಾಲೇಜ್‌ ಹೋಗೋ ವಿದ್ಯಾರ್ಥಿಗಳು ದಿನದ ೨೪ ಗಂಟೆಯಲ್ಲಿ ಕನಿಷ್ಠ ಅಂದರೂ ಮೂರು ಗಂಟೆಯಾದರೂ ಕನ್ನಡಿ ಮುಂದೆ ನಿಂತು ಟೈಮ್ ಪಾಸ್‌ ಮಾಡ್ತಾರೆ.ಅದರಲ್ಲೂ ಹುಡುಗಿಯರು ಇನ್ನೂ ಹೆಚ್ಚು ಕಾಲ ಟೈಮ್ ಕಳಿತಾರೆ.ಮೇಕಪ್, ಕೂದಲು ಸರಿ ಮಾಡಿಕೊಳ್ಳೋದು, ಡ್ರೆಸ್ ಸರಿ ಮಾಡಿಕೊಳ್ಳೋದು ಹೀಗೆ.. ಇದೀಗ ಕಾಲೇಜ್‌ನಲ್ಲಿ ಶೌಚಾಲಯದಲ್ಲಿ ಇಟ್ಟಿರುವ ಕನ್ನಡಿಯಿಂದಾಗಿ ಹಲವಾರು ಸಮಸ್ಯೆಗಳು ಉಲ್ಬಣಗೊಂಡಿದ್ದು,ಪ್ರಿನ್ಸಿಪಾಲ್ ಮಹತ್ವದ ನಿರ್ಧಾರವೊಂದಕ್ಕೆ ಬಂದಿದ್ದಾರೆ..ಏನದು ?

ಶಾಲಾ ಕಾಲೇಜುಗಳ ಶೌಚಾಲಯದಲ್ಲಿ ಕನ್ನಡಿ ಇದ್ದೇ ಇರುತ್ತೆ. ಇದೇ ಶಾಲೆಗಳ ಶೌಚಾಲಯದಲ್ಲಿರುವ ಕನ್ನಡಿಯನ್ನು ತೆಗೆಯವಂತೆ ಪ್ರಿನ್ಸಿಪಾಲ್ ಆದೇಶ ನೀಡಿದ್ದಾರೆ. ಕಾರಣ , ಶೌಚಾಲಯದಲ್ಲಿ ಕನ್ನಡಿ ಇಟ್ಟಿರುವ ಕಾರಣ ಮಕ್ಕಳು ತರಗತಿಗೆ ಹಾಜರಾಗುತ್ತಿಲ್ಲ, ವಿಳಂಬ ಮಾಡುತ್ತಿದ್ದಾರೆ ಎಂದು.ಇದೀಗ ಪ್ರಿನ್ಸಿಪಾಲ್ ಆದೇಶವೊಂದು ಭಾರಿ ಚರ್ಚೆಯಾಗುತ್ತಿದೆ.

ಕೇವಲ ತರಗತಿಗೆ ಮಾತ್ರವಲ್ಲ, ಇತರ ಮಕ್ಕಳಿಗೂ ಸಮಸ್ಯೆಯಾಗುತ್ತಿದೆ ಎಂದು ಪ್ರಿನ್ಸಿಪಾಲ್ ತಮ್ಮ ಆದೇಶದಲ್ಲಿ ಹೇಳಿದ್ದಾರೆ. ಶೌಚಾಲಯದಲ್ಲಿರುವ ಕನ್ನಡಿಗಾಗಿ ಗುಂಪು ಗುಂಪಾಗಿ ವಿದ್ಯಾರ್ಥಿಗಳು ಬಂದು ಕನ್ನಡಿ ಮುಂದೆ ಕಾಲ ಕಳೆಯುತ್ತಿದ್ದಾರೆ. ಇದರಿಂದ ಇತರ ವಿದ್ಯಾರ್ಥಿಗಳಿಗೆ ಶೌಚಾಲಯ ಬಳಕೆ ಮಾಡಲು ಸಮಸ್ಯೆಯಾಗುತ್ತಿದೆ. ಗುಂಪು ಗುಂಪಾಗಿ ವಿದ್ಯಾರ್ಥಿಗಳು ಕನ್ನಡಿ ಮುಂದೆ ನಿಂತು ಹೆಚ್ಚಿನ ಸಮಯ ಕಳೆಯುತ್ತಿರುವ ಕಾರಣ ಹಲವು ವಿದ್ಯಾರ್ಥಿಗಳು ಶೌಚಾಲಯಕ್ಕೆ ಹೋಗಲು ಹೆದರುತ್ತಿದ್ದಾರೆ. ಈ ಎಲ್ಲಾ ಸಮಸ್ಯೆಗಳಿಗೆ ಕನ್ನಡಿಯೇ ಕಾರಣವಾಗಿದೆ. ಹೀಗಾಗಿ ಈ ಕನ್ನಡಿಯನ್ನು ಶೌಚಾಲಯಿಂದ ತೆಗೆಯಲು ಆದೇಶ ನೀಡಿದ್ದಾರೆ.

ಅಂದ ಹಾಗೆ ಈ ಘಟನೆ ನಡೆದಿರುವುದು ಇಂಗ್ಲೆಂಡ್‌ನಲ್ಲಿ. ಇದಕ್ಕೆ ಪೋಷಕರಿಂದಲೂ ಭಾರಿ ಬೆಂಬಲ ವ್ಯಕ್ತವಾಗಿದೆ. ಹೀಗಾಗಿ ಪ್ರಿನ್ಸಿಪಾಲ್ ಅದಕ್ಕೆ ಪರಿಹಾರವನ್ನೂ ಕೊಟ್ಟಿದ್ದಾರೆ. ಯಾವುದೇ ವಿದ್ಯಾರ್ಥಿಗೆ ಕನ್ನಡಿ ಅವಶ್ಯಕತೆ ಬಂದರೆ ಶಾಲೆಯ ರೆಸೆಪ್ಶನ್ ಆವರಣದಲ್ಲಿ ಇಡಲಾಗಿದೆ. ಆದರೆ ಎಲ್ಲರಿಗೂ ಕಾಣುವಂತೆ ಅಲ್ಲ. ಇಲ್ಲಿ ಸಿಬ್ಬಂದಿಗಳನ್ನು ಕೇಳಿ ಕೆಲ ಕ್ಷಣಕ್ಕೆ ಕನ್ನಡಿ ಪಡೆಯಬಹುದು. ಇದು ಸೂಕ್ತ ಕಾರಣಗಳಿಗಾಗಿ ಮಾತ್ರ ಲಭ್ಯವಿದೆ ಎಂದು ಪ್ರಿನ್ಸಿಪಾಲ್ ತಮ್ಮ ಆದೇಶದಲ್ಲಿ ಹೇಳಿದ್ದಾರೆ.  ಮನೆಯಿಂದ ಎಲ್ಲಾ ಮಕ್ಕಳು ಕನ್ನಡಿ ನೋಡಿಕೊಂಡು ಬರುತ್ತಾರೆ. ಹೀಗಿರುವಾಗ ಮತ್ತೆ ಶೌಚಾಲಯದಲ್ಲಿ ಕನ್ನಡಿಯ ಅಗತ್ಯವಿಲ್ಲ ಎಂದಿದ್ದಾರೆ. 

See also  ವಿದ್ಯಾಮಾತಾದಲ್ಲಿ ನಾಳೆಯಿಂದ ಪ್ರಾರಂಭವಾಗಲಿದೆ ವಿಶೇಷ ತರಗತಿಗಳು!4ನೇ ತರಗತಿಯಿಂದ ಪಿಯುಸಿ ವ್ಯಾಸಂಗ ಪೂರೈಸಿರುವವರಿಗೆ ಸುವರ್ಣವಕಾಶ, ಭವಿಷ್ಯದ ಜೀವನ ರೂಪಿಸಿಕೊಳ್ಳಲು ಎರಡು ಹಂತಗಳಲ್ಲಿ ತರಬೇತಿ!
  Ad Widget   Ad Widget   Ad Widget   Ad Widget   Ad Widget   Ad Widget