ಕ್ರೈಂ

ಫೇಸ್ ಬುಕ್ ನಲ್ಲಿ ಪ್ರವಾದಿ ಅಶ್ಲೀಲ ನಿಂದನೆ: ಐವರ್ನಾಡಿನ ವ್ಯಕ್ತಿ ಬಂಧನ

909

ಸುಳ್ಯ: ಕಳೆದೊಂದು ವಾರದ ಹಿಂದೆ ಫೇಸ್ ಬುಕ್ ನಲ್ಲಿ ಪ್ರವಾದಿ ಮುಹಮ್ಮದ್ ರನ್ನು ಆಶ್ಲೀಲ ಪದಗಳಿಂದ ನಿಂದನೆಗೈದ ಆರೋಪದಲ್ಲಿ ಐವರ್ನಾಡು ಗ್ರಾಮದ ಜಗದೀಶ್ ಕೈವಲ್ತಡ್ಕ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಜಗದೀಶ್ ತನ್ನ ಫೇಸ್ ಬುಕ್ ಖಾತೆಯಲ್ಲಿ ಅವಹೇಳನಕಾರಿ ಪದಬಳಕೆ ಮಾಡಿ ಪ್ರವಾದಿಯನ್ನು ನಿಂದಿಸಿ ಕೋಟ್ಯಾಂತರ ಜನರ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದಾನೆ. ಈ ಕುರಿತಂತೆ ಪೋಲಿಸರು ಕ್ರಮ ಕೈಗೊಳ್ಳಬೇಕು ಮುಸ್ಲಿಂ ಸಂಘಟನೆಗಳು ದೂರು ನೀಡಿದ್ದವು. ಆದರೆ ದೂರು ನೀಡಿ ವಾರ ಕಳೆದರೂ ಆರೋಪಿಯನ್ನು ಪೊಲೀಸರು ಬಂಧಿಸಿರಲಿಲ್ಲ. ಪೊಲೀಸರ ನಡೆಯನ್ನು ಖಂಡಿಸಿ ಸುಳ್ಯ ಮುಸ್ಲಿಂ ಒಕ್ಕೂಟದ ವತಿಯಿಂದ ದ.ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸಂಚಾಲಕ ಇಕ್ಬಾಲ್ ಎಲಿಮಲೆ ಮುಂದಾಳತ್ವದಲ್ಲಿ ದೂರು ನೀಡಲಾಗಿತ್ತು. ಈ ಕುರಿತು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ವರಿಷ್ಠಾಧಿಕಾರಿಗಳು ಆರೋಪಿಯನ್ನು ಬಂಧಿಸಲು ಸೂಚಿಸಿದ್ದರು. ಇದರ ಬೆನ್ನಲ್ಲೇ ಬೆಳ್ಳಾರೆ ಪೊಲೀಸರು ಆರೋಪಿಯನ್ನು ಬಂಧಿಸಿ ವಶಕ್ಕೆ ಪಡೆದುಕೊಂಡಿದ್ದಾರೆ.

See also  ಬಸ್‌ ಗಾಗಿ ಕಾಯುತ್ತಿದ್ದ ಬಾಲಕಿಯರ ಮೇಲೆ ಹರಿದ ಲಾರಿ..! ಭೀಕರ ರಸ್ತೆ ಅಪಘಾತಕ್ಕೆ 8 ನೇ ತರಗತಿಯ 4 ವಿದ್ಯಾರ್ಥಿನಿಯರು ಸಾವು..!
Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget