ನಾಟೌಟ್: ಮೈಸೂರು-ಕೊಡಗು ಮಾಜಿ ಸಂಸದ ಪ್ರತಾಪ್ ಸಿಂಹ ಶುಕ್ರವಾರ ನೋವಿನ ಟ್ವೀಟ್ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಪ್ರತಾಪ್ ಸಿಂಹಗೆ ಅವರ ಅಭಿಮಾನಿಗಳೊಂದಿಗೆ ವಿರೋಧಿಗಳು ಕೂಡ ಸಮಾಧಾನ ಮಾಡಿದ್ದಾರೆ. ಎಂಪಿ ಟಿಕೆಟ್ ಕೈತಪ್ಪಿದ ಬೇಸರ ಒಂದು ವರ್ಷವಾದರೂ ಕಳೆದಿಲ್ಲ ಅನ್ನೋದು ಅವರ ಟ್ವೀಟ್ ನಲ್ಲಿಯೇ ಅರ್ಥವಾಗುವಂತಿದೆ.
ಮೈಸೂರು-ಕೊಡಗು ಕ್ಷೇತ್ರದ ಹಾಲಿ ಸಂಸದರಾಗಿ ಉತ್ತಮವಾಗಿಯೇ ಕೆಲಸ ಮಾಡಿದ್ದ ಪ್ರತಾಪ್ ಸಿಂಹ ಅವರ ಬದಲಿಗೆ ಬಿಜೆಪಿ ಹೈಕಮಾಂಡ್ ರಾಜಮನೆತನದ ಯದುವೀರ್ ಒಡೆಯರ್‌ಗೆ ಟಿಕೆಟ್ ನೀಡಿತ್ತು. ಯದುವೀರ್ ಒಡೆಯರ್ ಕೂಡ ದೊಡ್ಡ ಅಂತರದಲ್ಲಿ ಗೆಲುವು ಸಾಧಿಸಿದ್ದರು.
ಟಿಕೆಟ್ ಮಿಸ್ ಆಗಿದ್ದರ ಬಗ್ಗೆ ಬರೆದುಕೊಂಡಿರುವ ಪ್ರತಾಪ್ ಸಿಂಹ, ‘MP ಟಿಕೆಟ್ ಕಳೆದುಕೊಂಡು ಇವತ್ತಿಗೆ ಒಂದು ವರ್ಷವಾಯಿತು. ಆದರೆ ಕಾರ್ಯಕರ್ತರ ಪ್ರೀತಿ, ಜನರ ಆಶೀರ್ವಾದ ಇವತ್ತಿಗೂ ಹಾಗೇ ಇದೆ ಮತ್ತು ನೀವು ಕೊಟ್ಟಿರುವ ಈ ಶಕ್ತಿಯಿಂದಲೇ ಇವತ್ತಿಗೂ ಸೈದ್ಧಾಂತಿಕ ಕೆಲಸ ಮತ್ತು ಹೋರಾಟವನ್ನು 8 FIR ಹಾಕಿಸಿಕೊಂಡರೂ ಮುಂದುವರಿಸುತ್ತಿದ್ದೇನೆ. ನಿಮ್ಮ ಪ್ರೀತಿ, ವಿಶ್ವಾಸ ಮತ್ತು ಆಶೀರ್ವಾದ ಹೀಗೇ ನಿರಂತರವಾಗಿರಲಿ’ ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಕಾಮೆಂಟ್ ಮಾಡಿರುವ ಬಿಜೆಪಿ ಕಾರ್ಯಕರ್ತರೊಬ್ಬರು, ‘ನೀವು ಮಾಜಿ ಸಂಸದರಾಗಿ 8 FIR ಹಾಕಿಸಿಕೊಂಡಿದ್ದಿರಾ, ನಾನು ಕಳೆದ 25 ವರ್ಷದಿಂದ ಸೈದ್ಧಾಂತಿಕ ಕೆಲಸ ಮತ್ತು ಹೋರಾಟವನ್ನು ಮಾಡ್ತಾ ಬಂದಿದ್ದೆನೆ ನನಗೆ ಜಮಖಂಡಿ ಯುವ ಮೋರ್ಚ ಜವಾಬ್ದಾರಿ ಬಿಟ್ರೆ ಮತ್ತೆ ಯಾವುದೇ ಜವಾಬ್ದಾರಿ ಸಿಕ್ಕಿಲ್ಲ ಎಂದಿದ್ದಾರೆ.