ಕ್ರೈಂ

ಮೀನು ಹಿಡಿಯಲು ಹೋದ ಯುವಕ ಕರೆಂಟ್ ಶಾಕ್ ಹೊಡೆದು ಸಾವು

813

ಸುಳ್ಯ: ತಾಲೂಕಿನ ದೇವಚಳ್ಳ ಗ್ರಾಮದ ಕರಂಗಲ್ಲಿನ ಯುವಕನೋರ್ವ ನದಿಗೆ ಮೀನು ಹಿಡಿಯಲು ಹೋಗಿ ಕರೆಂಟ್ ಶಾಕ್ ಹೊಡೆದು ಮೃತಪಟ್ಟ ಘಟನೆ ನಡೆದಿದೆ.

ನ.5 ರ ರಾತ್ರಿ ಕರಂಗಲ್ಲಿನ ದಿ. ಕೇಶವ ಗೌಡ ಅವರ ಪುತ್ರ ಕರಂಗಲ್ಲಿನ ಪ್ರಕಾಶ್ (37 ) ಎಂಬವರು ಮಾಡಬಾಕಿಲು ಭಾಗದ ನದಿಗೆ ಗೆಳೆಯನೊಂದಿಗೆ ಹೋಗಿ ಬ್ಯಾಟರಿ ಬಳಸಿ ಮೀನು ಹಿಡಿಯಲು ತೆರಳಿದ್ದಾರೆ. ಮೀನು ಹಿಡಿಯುತ್ತಿರುವ ಸಂದರ್ಭ ಇನ್ವರ್ಟರ್ ಬ್ಯಾಟರಿ ವಿದ್ಯುತ್ ಪ್ರವಹಿಸಿ ಪ್ರಕಾಶ್ ಮೃತರಾಗಿರುವುದಾಗಿ ತಿಳಿದು ಬಂದಿದೆ. ಸುಬ್ರಹ್ಮಣ್ಯ ಎಸ್ ಐ ಜಂಬೂರಾಜ್ ಮಾಹಾಜನ್ ಪೊಲೀಸರೊಂದಿಗೆ ಸ್ಥಳಕ್ಕೆ ತೆರಳಿ ತನಿಖೆ ನಡೆಸಿದ್ದಾರೆ.

See also  ಕೆಲ ಮಹಿಳೆಯರಿಂದ “ಕಾನೂನಾತ್ಮಕ ಉಗ್ರವಾದ” ನಡೆಯುತ್ತಿದೆ ಎಂದದ್ದೇಕೆ ಕೋರ್ಟ್? ವರದಕ್ಷಿಣೆ ಕಾಯಿದೆ ದುರುಪಯೋಗವಾಗುತ್ತಿದೆಯಾ?
  Ad Widget   Ad Widget   Ad Widget   Ad Widget   Ad Widget   Ad Widget   Ad Widget