Latest

ಉಡುಪಿ: ತಪ್ಪಿಸಿಕೊಳ್ಳಲು ಯತ್ನಿಸಿ ಪೊಲೀಸರ ಮೇಲೆಯೇ ಹಲ್ಲೆ,ನಟೋರಿಯಸ್ ರೌಡಿ ಇಸಾಕ್ ಕಾಲಿಗೆ ಗುಂಡೇಟು

582
Spread the love

ನ್ಯೂಸ್‌ ನಾಟೌಟ್:ಗರುಡ ಗ್ಯಾಂಗ್ನಲ್ಲಿ ಗುರುತಿಸಿಕೊಂಡಿದ್ದ ನಟೋರಿಯಸ್ ರೌಡಿ ಇಸಾಕ್ ಕಾಲಿಗೆ ಗುಂಡೇಟು ಬಿದ್ದಿದೆ.ಈ ಘಟನೆ ಹಿರಿಯಡ್ಕ ಸಮೀಪದ ಗುಡ್ಡೆ ಅಂಗಡಿ ಬಳಿ ನಡೆದಿದ್ದು, ಆರೋಪಿಗಳನ್ನು ಹಾಸನದ ಚನ್ನರಾಯಪಟ್ಟಣದಿಂದ ಬಂಧಿಸಿ ಉಡುಪಿಗೆ ವಿಚಾರಣೆಗೆ ಕರೆದುಕೊಂಡು ಬರುವ ವೇಳೆ ಆರೋಪಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ವರದಿಯಾಗಿದೆ.

ಪ್ರಕರಣದಲ್ಲಿ ಮೂವರು ಪೊಲೀಸರಿಗೆ ಗಾಯವಾಗಿದ್ದು, ಕೆಎಂಸಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವಶದಲ್ಲಿರುವ ಮೂವರು ಆರೋಪಿಗಳ ವಿಚಾರಣೆ ಮುಂದುವರಿದಿದೆ.ಮೂತ್ರ, ವಾಂತಿ ಬರುತ್ತದೆ ಎಂದು ಹೇಳಿ ಪರಾರಿಯಾಗಲು ಯತ್ನಿಸಿದ್ದ ಎನ್ನಲಾಗಿದೆ. ಮಣಿಪಾಲ, ಹಿರಿಯಡ್ಕ-ಮಲ್ಪೆ ಮೂವರು ಪೊಲೀಸ್ ಸಿಬ್ಬಂದಿಗೆ ಕೆಎಂಸಿಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.

See also  ಕೋಳಿ ಅಂಕದ ಕೋಳಿ ರುಚಿ ಸಕತ್ತಾಗಿದೆ ಬನ್ನಿ ಆ ರುಚಿ ತೋರಿಸುತ್ತೇವೆ- ಡಿಕೆಶಿಗೆ ಕಾರ್ಕಳ ಶಾಸಕ ಸುನೀಲ್ ಕುಮಾರ್‌ ರಿಂದ ಆಹ್ವಾನ
  Ad Widget   Ad Widget   Ad Widget   Ad Widget