ಬೆಳ್ಳಾರೆ: ಭಾ ಜ ಪಾ ಯುವ ಮೋರ್ಚಾ ಬೆಳ್ಳಾರೆ ಮಹಾಶಕ್ತಿ ಕೇಂದ್ರ ಘಟಕದ ವತಿಯಿಂದ ರಕ್ಷಾಬಂಧನ ದಿನವನ್ನು ಕೋವಿಡ್ ವಾರಿಯರ್ ಗಳಾಗಿ ಸೇವೆ ಸಲ್ಲಿಸಿದವರಿಗೆ ಧನ್ಯವಾದ ತಿಳಿಸುವ ಸಲುವಾಗಿ ‘ ರಕ್ಷಾ ಸಂಕಲ್ಪ ಉತ್ಸವ’ ದಿನವನ್ನಾಗಿ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ವಿಶಿಷ್ಟವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಪ್ರಾಸ್ತಾವಿಕ ಮಾತುಗಳನ್ನಾಡಿದ ಸುಳ್ಯ ಯುವಮೋರ್ಚಾ ಮಂಡಲ ಸಮಿತಿ ಅಧ್ಯಕ್ಷರಾದ ಕೃಷ್ಣ ಎಂ ಆರ್ ರಕ್ಷಾ ಸಂಕಲ್ಪ ದಿನ ಆಚರಿಸುವ ಉದ್ದೇಶವನ್ನು ವಿವರಿಸಿ ರಕ್ಷಾಬಂಧನದ ಮಹತ್ವ ವಿವರಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಆರ್.ಕೆ ಭಟ್ ಬೆಳ್ಳಾರೆಯವರು ಭಾರತದ ಸಂಸ್ಕೃತಿಯಲ್ಲಿ ರಕ್ಷಾ ಬಂಧನವು ಎಷ್ಟು ಮಹತ್ವ ಮತ್ತು ಅರ್ಥಪೂರ್ಣ ಎಂಬುದರ ಬಗೆಗೆ ವಿವರಿಸಿದರು. ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷರಾದ ಪುಲಸ್ಯ ರೈ, ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಚಂದ್ರಶೇಖರ ಪನ್ನೆ, ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ಪ್ರವೀಣ್ ನೆಟ್ಟಾರು,
ಬೆಳ್ಳಾರೆ ಶಕ್ತಿಕೇಂದ್ರ ಘಟಕ ಅಧ್ಯಕ್ಷರಾದ ವಸಂತ ಹೇಮಳ, ಸದಸ್ಯರಾದ ಹರೀಶ್ ಕೊಡಿಯಾಲ, ವಸಂತ ಬೆಳ್ಳಾರೆ, ಭಜರಂಗ ದಳ ಸಂಚಾಲಕರಾದ ಸಚಿನ್ ರೈ ಪೂವಾಜೆ ಉಪಸ್ಥಿತರಿದ್ದರು. ಘಟಕದ ಪ್ರಧಾನ ಕಾರ್ಯದರ್ಶಿ ಹರ್ಷಿತ್ ಕುಮಾರ್ ಪೆರುವಾಜೆ ಕಾರ್ಯಕ್ರಮ ನಿರೂಪಿಸಿದರು.