ದೇಶ-ಪ್ರಪಂಚ

ಪ್ರಧಾನಿ ಮೋದಿ ಟ್ವಿಟರ್ ಖಾತೆಗೆ ಕನ್ನ: ಬಿಟ್ ಕಾಯಿನ್ ಲಿಂಕ್ ಹಂಚಿಕೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕೃತ ಟ್ವಿಟರ್ ಖಾತೆಯು ಶನಿವಾರ ತಡರಾತ್ರಿ ಕೆಲ ಹೊತ್ತು ನಿಯಂತ್ರಣವನ್ನು ಕಳೆದುಕೊಂಡಿತ್ತು ಹ್ಯಾಕ್ ಬಳಿಕ ಮರುಸ್ಥಾಪಿಸಲಾಗಿದೆ ಎಂದು ಪ್ರಧಾನಮಂತ್ರಿ ಕಾರ್ಯಾಲಯ (ಪಿಎಂಒ) ಭಾನುವಾರ ತಿಳಿಸಿದೆ.

ಟ್ವಿಟ್ಟರ್ ಖಾತೆ ಹ್ಯಾಕ್ ಆಗಿದ್ದ ವೇಳೆಯಲ್ಲಿ ‘ಬಿಟ್ ಕಾಯಿನ್ ಕಾನೂನುಬದ್ಧಗೊಳಿಸಲಾಗಿದ್ದು, ಸರ್ಕಾರವು ಅಧಿಕೃತವಾಗಿ 500 ಬಿಟ್ ಕಾಯಿನ್ ಗಳನ್ನು ಖರೀದಿಸಿದೆ. ಇದನ್ನು ದೇಶದ ಜನರಿಗೆ ವಿತರಿಸಲಾಗುವುದು ಎಂದು ಟ್ವೀಟ್ ಮಾಡಲಾಗಿತ್ತು. ಇದರ ಜತೆಗೆ ಬಿಟ್ ಕಾಯಿನ್ ಕುರಿತಾದ ಲಿಂಕ್ ಹಂಚಲಾಗಿತ್ತು. ಬಳಿಕ ಈ ಟ್ವೀಟ್ ಅನ್ನು ಅಳಿಸಿ ಹಾಕಲಾಗಿದೆ. ಈ ಕುರಿತು ಟ್ವೀಟ್ ಮಾಡಿರುವ ಪಿಎಂಒ ಕಚೇರಿ, ‘ಪ್ರಧಾನಿ ನರೇಂದ್ರ ಮೋದಿ ಅವರ ಟ್ವಿಟರ್ ಖಾತೆ ಕೆಲಕಾಲ ನಿಯಂತ್ರಣದಿಂದ ಜಾರಿತ್ತು. ವಿಷಯವನ್ನು ಟ್ವಿಟರ್‌ ಗಮನಕ್ಕೆ ತರಲಾಗಿದ್ದು, ಖಾತೆಯನ್ನು ತಕ್ಷಣವೇ ಸುರಕ್ಷಿತಗೊಳಿಸಲಾಗಿದೆ. ಖಾತೆಗೆ ಧಕ್ಕೆ ಉಂಟಾಗಿರುವ ಈ ಅವಧಿಯಲ್ಲಿ ಹಂಚಿಕೆಯಾಗಿರುವ ಟ್ವೀಟ್ ಗಳನ್ನು ಕಡೆಗಣಿಸಬೇಕು’ ಎಂದು ವಿನಂತಿಸಿದೆ.

Related posts

ವ್ಯಕ್ತಿಯ ಸ್ಕ್ಯಾನಿಂಗ್ ರಿಪೋರ್ಟ್ ನಿಂದ ತಿಳಿಯಿತು ಆಘಾತಕಾರಿ ವಿಷಯ..! ಆತನ ಗೆಳೆಯರೇ ಮಾಡಿದ್ದರಾ ಅಮಾನವಿಯ ಕೃತ್ಯ?

ರಾಮ ಮಂದಿರದ ಹೆಸರಲ್ಲಿನ ಸುಳ್ಳು ಸುದ್ದಿ ಮತ್ತು ವಂಚನೆಗಳ ಬಗ್ಗೆ ಕೇಂದ್ರ ಸರ್ಕಾರ ಹೇಳಿದ್ದೇನು? ಈ ಬಗ್ಗೆ ನೋಟಿಸ್ ನಲ್ಲೇನಿದೆ..?

ಯುರೋಪ್‌ನಲ್ಲಿ ಇಸ್ಲಾಮ್‌ಗೆ ಜಾಗವಿಲ್ಲ ಎಂದದ್ದೇಕೆ ಇಟಲಿ ಪ್ರಧಾನಿ..? ಏನಿದು ಯುರೋಪಿಯನ್ ನಾಗರಿಕತೆ ಮತ್ತು ಇಸ್ಲಾಮಿಕ್ ಸಂಸ್ಕೃತಿ ನಡುವಿನ ತಿಕ್ಕಾಟ?