ಕ್ರೈಂ

ಪೆರಾಜೆ: ತೆಂಗಿನ ಮರದಿಂದ ಬಿದ್ದು ವ್ಯಕ್ತಿ ಸಾವು

390
Spread the love

ಸುಳ್ಯ: ಇಲ್ಲಿನ ಬಂಗಾರಕೋಡಿಯ ಹರೀಶ್ ಎಂಬವರು ತೆಂಗಿನ ಮರದಿಂದ ಬಿದ್ದು ಮೃತಪಟ್ಟ ಘಟನೆ ಜ. 5 ರಂದು ನಡೆದಿದೆ.

ಬಂಗಾರಕೋಡಿಯ ಹರೀಶರು ತಮ್ಮ ಹಳೆ ಮನೆಯನ್ನು ಕೆಡವಿ ಹೊಸ ಮನೆ ಕಟ್ಟಲು ಜಾಗ ಸಮತಟ್ಟು ಮಾಡಲು ಜೆಸಿಬಿಯನ್ನು ದ. 29ರಂದು ಕರೆಯಿಸಿದ್ದರು . ಜೆಸಿಬಿಯವರು ಮನೆಕೆಡವಿ ಸಮತಟ್ಟು ಮಾಡುತ್ತಿದ್ದಾಗ , ಅವರಿಗೆ ಕುಡಿಯಲೆಂದು ಬೊಂಡ ತೆಗೆಯಲು ಹರೀಶರು ತೆಂಗಿನ ಮರ ಏರಿದ್ದರು. ಈ ಸಂದರ್ಭದಲ್ಲಿ ತೆಂಗಿನ ಮರದಿಂದ ಆಯತಪ್ಪಿ ಹರೀಶರು ಬಿದ್ದು ಗಂಭೀರ ಗಾಯಗೊಂಡರು. ಕೂಡಲೇ ಅಲ್ಲಿದ್ದವರು ಸುಳ್ಯ ಖಾಸಗಿ ಆಸ್ಪತ್ರೆಗೆ ಕರೆತಂದು ಬಳಿಕ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಿದರು. ಕುತ್ತಿಗೆ ಹಿಂಬಾಗ, ಬೆನ್ನು, ಸೊಂಟದ ಮೂಳೆ ಮುರಿತಕ್ಕೊಳಗಾದ ಹರೀಶ್ ಅವರು ಚಿಕಿತ್ಸೆ ಫಲಕಾರಿಯಾಗದೇ ಜ. 5 ರಂದು ಮೃತಪಟ್ಟರು. ಮೃತರು ಪತ್ನಿ ಅಂತಾರಾಷ್ಟ್ರೀಯ ಹಿರಿಯ ಕ್ರೀಡಾಪಟು ವಿದ್ಯಾ ಬಂಗಾರಕೋಡಿ, ಇಬ್ಬರು ಪುತ್ರಿಯರು , ಓರ್ವ ಪುತ್ರನನ್ನು ಅಗಲಿದ್ದಾರೆ.

See also  ಸುಳ್ಯದಲ್ಲಿ ಸಿಕ್ಕಿಬಿದ್ದ ಆರೋಪಿಯಿಂದ 44 ಗ್ರಾಂನ ಎಂಡಿಎಂಎ ವಶ
  Ad Widget   Ad Widget   Ad Widget   Ad Widget   Ad Widget   Ad Widget