ಬೆಂಗಳೂರು: ಪಾಪ ಪಾಂಡು ಧಾರವಾಹಿ ಮೂಲಕ ಜನಪ್ರಿಯರಾಗಿದ್ದ ಹಿರಿಯ ಕಲಾವಿಧ ಶಂಕರ್ ರಾವ್ (84) ಇಂದು ನಿಧನರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಿಗ್ಗೆ 6.30ಕ್ಕೆ ಕೊನೆಯುಸಿರೆಳೆದಿದ್ದಾರೆ. ಈ ಮೂಲಕ ಪಾಪ ಪಾಂಡು ಖ್ಯಾತಿಯ ಹಿರಿಯ ನಟ ಶಂಕರ್ ರಾವ್ ಬದುಕಿನ ಪಾತ್ರಕ್ಕೆ ಪೂರ್ಣ ವಿದಾಯ ಹೇಳಿದ್ದಾರೆ. ಶಾಲಾ ದಿನಗಳಿಂದಲೂ ನಟನೆಯಲ್ಲಿ ಆಸಕ್ತಿಯನ್ನು ಹೊಂದಿದ್ದಂತ ಕಲಾವಿದ ಶಂಕರ್ ರಾವ್, ಹವ್ಯಾಸಿ ರಂಗಭೂಮಿ ಕಲಾವಿದರಾಗಿ ಪದಾರ್ಪಣೆ ಮಾಡಿದ್ದರು. ನಂತರ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದರು. ಇಷ್ಟೆಲ್ಲ ಮಾಡಿದ್ದರೂ ಇವರಿಗೆ ಹೆಚ್ಚು ಖ್ಯಾತಿ ತಂದಿಕೊಟ್ಟಿದ್ದು ಪಾಪ ಪಾಂಡು ಧಾರವಾಹಿ ಆಗಿತ್ತು.