ಕರಾವಳಿ

ಪಂಡಿತ್ ದೀನ್ ದಯಾಳ್ ಉಪಾಧ್ಯಾಯ 105ನೇ ಜನ್ಮ ಜಯಂತಿ, ಗೌರವ ಪ್ರಣಾಮ ಕಾರ್ಯಕ್ರಮ

923

ಸುಳ್ಯ : ರಾಷ್ಟ್ರೀಯವಾದಿ ಚಿಂತಕ, ಭಾರತೀಯ ಜನಸಂಘದ ಸಂಸ್ಥಾಪಕರಾದ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ 105ನೇ ಜನ್ಮ ಜಯಂತಿಯಂದು ಗೌರವಪೂರ್ವಕ ಪ್ರಣಾಮ ಅರ್ಪಿಸುವ ಕಾರ್ಯಕ್ರಮ ವನ್ನು ಶನಿವಾರ ಸುಳ್ಯ ದ ಬಿ.ಜೆ.ಪಿ ಕಚೇರಿಯಲ್ಲಿ  ಆಚರಿಸಲಾಯಿತು. ಹಿರಿಯರು, ಬಿಜೆಪಿ ಮಂಡಲ ಮಾಜಿ ಅಧ್ಯಕ್ಷರಾದ  ಎನ್.ಎ. ರಾಮಚಂದ್ರ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.   ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಜೆಪಿ ಮಂಡಲ ಅಧ್ಯಕ್ಷರಾದ  ಹರೀಶ್ ಕಂಜಿಪಿಲಿ ವಹಿಸಿದ್ದರು, ನಗರ ಪಂಚಾಯತ್ ಅಧ್ಯಕ್ಷ  ವಿನಯ್ ಕುಮಾರ್ ಕಂದಡ್ಕ ಅವರು ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರು ಕಷ್ಟದ ದಿನಗಳಲ್ಲಿ ಪಕ್ಷ ಸಂಘಟನೆಯ ಬಗ್ಗೆ ಮಾಡಿದ ತ್ಯಾಗ ಸೇವೆಗಳನ್ನು ಈ ಸಂದರ್ಭದಲ್ಲಿ ನೆನಪಿಸಿಕೊಂಡರು. ವೇದಿಕೆಯಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಶ್ರೀ. ವೆಂಕಟ್ ವಳಲಂಬೆ, ರಾಜ್ಯ ರೈತ ಮೋರ್ಚಾದ ಉಪಾಧ್ಯಕ್ಷ ಎ. ವಿ. ತೀರ್ಥರಾಮ, ಜಿಲ್ಲಾ ಯುವಮೋರ್ಚ ದ ಅಧ್ಯಕ್ಷ ಗುರುದತ್ ನಾಯಕ್, ಮಂಡಳ ಬಿಜೆಪಿ ಕಾರ್ಯದರ್ಶಿ ಸುಭೋದ್ ಶೆಟ್ಟಿ ಮೇನಾಲ, ರಾಕೇಶ್ ರೈ ಕೆಡೆಂಜಿ, ನಗರ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಐ.ಬಿ. ಚಂದ್ರಶೇಖರ್, ಜಿಲ್ಲಾ ಬಿಜೆಪಿ ಸದಸ್ಯರರಾದ ವೆಂಕಟ್ ದಂಬೆಕೋಡಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ನಗರ ಮಹಾಶಕ್ತಿ ಕೇಂದ್ರದ ಕಾರ್ಯ ದರ್ಶಿ ಜಿನಪ್ಪ ಪೂಜಾರಿ, ನಗರ ಪಂಚಾಯತ್ ಉಪಾಧ್ಯಕ್ಷ ಸರೋಜಿನಿ ಪೆಲ್ತಡ್ಕ, ನಗರ ಪಂಚಾಯತ್ ಸ್ಥಾಯಿ ಸಮಿತಿಯ ಅಧ್ಯಕ್ಷ ಬುದ್ಧ ನಾಯ್ಕ್, ನಗರ ಪಂಚಾಯತ್ ಸದಸ್ಯರು ಗಳಾದ ಸುಧಾಕರ್, ಶೀಲ ಅರುಣ್ ಕುರುಂಜಿ, ಕಿಶೋರಿ ಶೇಟ್, ಶಸಿಕಲಾ  ದುಗಲಡ್ಕ, ಶಿಲ್ಪಾ ಸುದೇವ್, ಬಾಲಕೃಷ್ಣ ರೈ, ಸಿ.ಎ ಬ್ಯಾಂಕ್ ನ ಅಧ್ಯಕ್ಷ ರಾದ ಹರೀಶ್ ಬೂಡುಪನ್ನೆ,  ಸಿಎ ಬ್ಯಾಂಕ್ ನ ನಿರ್ದೇಶಕ ರಾದ ನವೀನ್ ಕುದ್ಪಾಜೆ, ಬೂತ್ ಸಮಿತಿಯ ಅಧ್ಯಕ್ಷ ರಾದ ಬೂಡು ರಾಧಾಕೃಷ್ಣ ರೈ, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ರಾದ ಚನಿಯ ಕಲ್ತಡ್ಕ, ಯುವಮೋರ್ಚದ ಪ್ರಧಾನ ಕಾರ್ಯದರ್ಶಿ ಸುನಿಲ್ ಕೇರ್ಪಳ, ಬಿಜೆಪಿ ಮಂಡಲ ಸೋಶಿಯಲ್ ಮಿಡಿಯ ಇದರ ಸಹಸಂಚಾಲಕರಾದ ಸುಪ್ರೀತ್ ಮೋಂಟಡ್ಕ, ಮಂಡಳ ಕಾರ್ಯದರ್ಶಿ ಮೋಹಿನಿ ನಾಗರಾಜ್, ಜಾಲ್ಸೂರು ಗ್ರಾಮ ಪಂಚಾಯಿತ್ ನ ಮಾಜಿ ಅಧ್ಯಕ್ಷ ಅಶೋಕ್ ಅಡ್ಕಾರ್, ಜಯನಗರ ಬೂತ್ ಅಧ್ಯಕ್ಷ ರೋಹಿತ್ ಕೊಂಗೋಡಿ, ಚಂದ್ರಶೇಖರ್ ಕೇರ್ಪಳ, ದಯಾನಂದ ಕೇರ್ಪಳ, ಜಗದೀಶ್ ಸಲಳಿಕುಂಜ, ದಾಮೋದರ ಮಂಚಿ, ಶೀನಪ್ಪ ಬಯಂಬು, ವಿಜಯ ಕಾಯರ್ತೋಡಿ, ಚಂದ್ರಶೇಖರ್ ಪೂಜಾರಿ ಭಾಗವಹಿಸಿದ್ದರು. ಸೇವೆ ಮತ್ತು ಸಮರ್ಪಣೆ ಅಭಿಯಾನದ ಪ್ರತಿಜ್ಞಾವಿಧಿಯನ್ನು ಸುಭೋದ್ ಶೆಟ್ಟಿ ನೆರವೇರಿಸಿದರು. ಈ ಕಾರ್ಯಕ್ರಮವನ್ನು ಐ.ಬಿ. ಚಂದ್ರಶೇಖರ್ ಸ್ವಾಗತಿಸಿ, ಜಿನ್ನಪ್ಪ ಪೂಜಾರಿ ವಂದಿಸಿದರು, ರಾಕೇಶ್ ರೈ ಕೆಡೆಂಜಿ ನಿರೂಪಿಸಿದರು.

See also  ಲಾಟರಿಯಲ್ಲಿ 25 ಕೋಟಿ ಗೆದ್ದರೂ ಕಣ್ಣೀರು ಇಂಗಿಲ್ಲ.. !
  Ad Widget   Ad Widget   Ad Widget   Ad Widget   Ad Widget   Ad Widget   Ad Widget