ವಾಷಿಂಗ್ಟನ್: ಭಯೋತ್ಪಾದಕರೇ ನಮ್ಮಲ್ಲಿ ಇಲ್ಲ ಎಂದು ನವರಂಗಿ ಆಟ ಆಡುತ್ತಿದ್ದ ಪಾಕಿಸ್ತಾನದ ಅಸಲಿ ಮುಖ ಮತ್ತೊಮ್ಮೆ ಬಯಲಾಗಿದೆ. ಅಂತರರಾಷ್ಟ್ರೀಯ ಮಟ್ಟದ 12 ನಿಷೇಧಿತ ಉಗ್ರ ಸಂಘಟನೆಗಳಿಗೆ ನೆಲೆಯಾಗಿದೆ ಎಂದು ಅಮೆರಿಕದ ಸಿಆರ್ಎಸ್ (ಸಂಸದೀಯ ಸಂಶೋಧನಾ ಸೇವೆ) ವರದಿ ಹೇಳಿದೆ. ಲಷ್ಕರ್–ಎ–ತಯ್ಬಾ ಮತ್ತು ಜೈಷ್–ಎ–ಮೊಹಮ್ಮದ್ ಉಗ್ರ ಸಂಘಟನೆ ಕೂಡ ಇದರಲ್ಲಿ ಸೇರಿವೆ. ಸಶಸ್ತ್ರ ಭಯೋತ್ಪಾದಕ ಗುಂಪುಗಳ ಕಾರ್ಯಾಚರಣೆಗೆ ಪಾಕಿಸ್ತಾನವು ನೆಲೆಯಾಗಿದೆ. ಈ ಪೈಕಿ ಕೆಲವು ಉಗ್ರ ಸಂಘಟನೆಗಳು 1980ರಿಂದಲೂ ಅಲ್ಲಿ ಅಸ್ತಿತ್ವದಲ್ಲಿವೆ ಎಂದು ವರದಿ ಹೇಳಿದೆ. ಇತ್ತೀಚೆಗೆ ನಡೆದ ಐತಿಹಾಸಿಕ ಕ್ವಾಡ್ ಶೃಂಗಸಭೆಯ ಮುನ್ನಾ ದಿನ ಅಮೆರಿಕ ಕಾಂಗ್ರೆಸ್ ನ ದ್ವಿಪಕ್ಷೀಯ ಸಂಶೋಧನಾ ವಿಭಾಗವು ವರದಿ ಬಿಡುಗಡೆ ಮಾಡಿತ್ತು.