Latestಕ್ರೀಡೆಕ್ರೀಡೆ/ಸಿನಿಮಾದೇಶ-ವಿದೇಶ

ಭಾರತ, ಪಾಕ್‌ ಮಧ್ಯೆ ಜುಲೈ 20 ರಂದು ಬಹುನಿರೀಕ್ಷಿತ ಮ್ಯಾಚ್‌..! ವಿಶ್ವ ಚಾಂಪಿಯನ್‌ ಶಿಪ್ ಆಫ್ ಲೆಜೆಂಡ್ಸ್

2.9k

ನ್ಯೂಸ್ ನಾಟೌಟ್: ಭಾರತ ಮತ್ತು ಪಾಕಿಸ್ತಾನ ನಡುವಿನ ಬಹುನಿರೀಕ್ಷಿತ ಟಿ-20 ಕ್ರಿಕೆಟ್ ಪೈಪೋಟಿ ಮತ್ತೆ ಆರಂಭವಾಗಲಿದ್ದು, ಜುಲೈ 20 ರಂದು ಎರಡು ತಂಡಗಳು ಮುಖಾಮುಖಿಯಾಗಲಿವೆ.
ಟೂರ್ನಿಯಲ್ಲಿ ಟೀಂ ಇಂಡಿಯಾದ ಸದಸ್ಯರು ಆಡುತ್ತಿಲ್ಲ. ಬದಲಾಗಿ ಟೀ ಇಂಡಿಯಾಗೆ ನಿವೃತ್ತಿ ಹೇಳಿದ ಹಿರಿಯ ಆಟಗಾರರು ಆಡಲಿದ್ದಾರೆ.

ವಿಶ್ವ ಚಾಂಪಿಯನ್‌ ಶಿಪ್ ಆಫ್ ಲೆಜೆಂಡ್ಸ್ 2025 ರ ಭಾಗವಾಗಿ ಭಾರತ ಚಾಂಪಿಯನ್ಸ್ ಮತ್ತು ಪಾಕಿಸ್ತಾನ ಚಾಂಪಿಯನ್ಸ್ ಮಧ್ಯೆ ಜುಲೈ 20 ರಂದು ಬರ್ಮಿಂಗ್ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ ಲೀಗ್‌ ಪಂದ್ಯ ನಡೆಯಲಿದೆ.

ವಿಶ್ವ ಚಾಂಪಿಯನ್‌ ಶಿಪ್ ಆಫ್ ಲೆಜೆಂಡ್ಸ್‌ ನ ಎರಡನೇ ಆವೃತ್ತಿಯು ಜುಲೈ 18 ರಂದು ಪ್ರಾರಂಭವಾಗಲಿದ್ದು ಯುವರಾಜ್ ಸಿಂಗ್ ಭಾರತ ತಂಡವನ್ನು ಮುನ್ನಡೆಸಲಿದ್ದರೆ. ಯೂನಿಸ್ ಖಾನ್ ಪಾಕಿಸ್ತಾನ ಚಾಂಪಿಯನ್ಸ್ ತಂಡವನ್ನು ಮುನ್ನಡೆಸಲಿದ್ದಾರೆ.

ಕಳೆದ ವರ್ಷ ವಿಶ್ವ ಚಾಂಪಿಯನ್‌ ಶಿಪ್ ಆಫ್ ಲೆಜೆಂಡ್ಸ್ ಟೂರ್ನಿ ಆರಂಭಗೊಂಡಿತ್ತು. ಫೈನಲಿನಲ್ಲಿ ಪಾಕಿಸ್ತಾನವನ್ನು ಸೋಲಿಸಿ ಭಾರತ 5 ವಿಕೆಟ್‌ ಜಯ ಸಾಧಿಸಿ ಕಪ್‌ ಗೆದ್ದಿತ್ತು. ಭಾರತ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್‌, ಪಾಕಿಸ್ತಾನ, ವೆಸ್ಟ್‌ ಇಂಡೀಸ್‌ನ ಹಿರಿಯ ಆಟಗಾರರು ಈ ಟೂರ್ನಿಯಲ್ಲಿ ಭಾಗವಹಿಸುತ್ತಾರೆ.

ರೈಲ್ವೆ ಹಳಿಯ ಮೇಲೆ ಕಾರು ಚಲಾಯಿಸಿದ ಯುವತಿ..! ಬೆಂಗಳೂರು-ಹೈದರಾಬಾದ್‌ ರೈಲು ಸ್ಥಗಿತ..!

See also  11 ವರ್ಷದ ಬಾಲಕನ ಹೊಟ್ಟೆಯಲ್ಲಿ 100ಗ್ರಾಂ ಚಿನ್ನದ ಗಟ್ಟಿ..! ಏನಿದು ಘಟನೆ..?
  Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget