ಮಂಗಳೂರು: ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆದಿದ್ದು ಇದೀಗ ಮತ ಎಣಿಕೆ ಆರಂಭವಾಗಿದೆ. ಕುರುಂಜಿ ಕುಡಿಗಳಾಡ ಡಾ ಚಿದಾನಂದ ಕೆವಿ ಹಾಗೂ ರೇಣುಕಾ ಪ್ರಸಾದ್ ನಡುವಿನ ನೇರ ಹಣಾಹಣಿ ಭಾರಿ ಕುತೂಹಲ ಕೆರಳಿಸಿದೆ. ಮೊದಲ ಸುತ್ತಿನಲ್ಲಿ ಮುನ್ನಡೆ ಸಾಧಿಸಿರುವ ರೇಣುಕಾ ಪ್ರಸಾದ್ ಇದೀಗ ಎರಡನೇ ಸುತ್ತಿನಲ್ಲೂ ಮುನ್ನಡೆ ಸಾಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.