ಕ್ರೈಂ

ಸೆಲ್ಫಿ ತೆಗೆಯಲು ಹೋಗಿ ಜಲಪಾತಕ್ಕೆ ಬಿದ್ದು ನರ್ಸಿಂಗ್ ವಿದ್ಯಾರ್ಥಿ ಸಾವು

379
Spread the love

ಮಹದೇಶ್ಬರ ಬೆಟ್ಟ: ಪ್ರವಾಸಿ ತಾಣ ಹೊಗೇನಕಲ್ ಜಲಪಾತದ ಬಳಿ ಸೆಲ್ಫಿ ತೆಗೆಯಲು ಹೋಗಿ ಯುವಕನೊಬ್ಬ ಜಲಪಾತಕ್ಕೆ ಬಿದ್ದು ಮೃತಪಟ್ಟಿದ್ದಾನೆ.

ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಉಮಾಶಂಕರ್ (19) ಮೃತಪಟ್ಟ ಯುವಕ. ಮೃತ ಉಮಾಶಂಕರ್ ಕೊಳ್ಳೇಗಾಲದ ಜೆಎಸ್ ಎಸ್ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಯಾಗಿದ್ದಾನೆ. ಜಲಪಾತ ವೀಕ್ಷಣೆಗಾಗಿ ಉಮಾಶಂಕರ್ ಸ್ನೇಹಿತರೊಂದಿಗೆ ಗುರುವಾರ ಹೊಗೇನಕಲ್ ಗೆ ಬಂದಿದ್ದ. ನೀರು ಆಳಕ್ಕೆ ಧುಮುಕುವ ಸ್ಥಳಕ್ಕೆ ಆತ ತೆರಳಿದ್ದ ಎನ್ನಲಾಗಿದೆ. ಅಲ್ಲಿ ಸೆಲ್ಫಿ ತೆಗೆಯುವ ಯತ್ನದಲ್ಲಿ ಕಾಲು ಜಾರಿ 80 ಅಡಿಯಷ್ಟು ಆಳಕ್ಕೆ ಬಿದ್ದು ನಾಪತ್ತೆಯಾಗಿದ್ದ.  ಗುರುವಾರ ರಾತ್ರಿಯವರೆಗೂ ಆತ ಪತ್ತೆಯಾಗಿರಲಿಲ್ಲ. ಶುಕ್ರವಾರ ಬೆಳಿಗ್ಗೆ 7.30ರ ಸುಮಾರಿಗೆ ಬಿದ್ದ ಸ್ಥಳದಿಂದ 50 ಮೀಟರ್ ದೂರದಲ್ಲಿ ಮೃತದೇಹ ಪತ್ತೆಯಾಗಿದೆ ಎಂದು ಮಹದೇಶ್ವರ ಬೆಟ್ಟದ ಪೊಲೀಸರು ತಿಳಿಸಿದ್ದಾರೆ.

See also  ರಸ್ತೆಯಲ್ಲಿ ಪಟಾಕಿ ಸಿಡಿಸುತ್ತಿದ್ದ ವ್ಯಕ್ತಿಯ ಮೇಲೆ ಹರಿದ ಕಾರು..! ಇಲ್ಲಿದೆ ಸಿಸಿಟಿವಿ ದೃಶ್ಯ..!
  Ad Widget   Ad Widget   Ad Widget   Ad Widget   Ad Widget   Ad Widget