Latestಕೊಡಗುಕೊಡಗು

ಪ್ಲಾಸ್ಟಿಕ್ ಹೊದಿಕೆಯಡಿಯೇ ಈ ಬಡ ಕುಟುಂಬದ ಜೀವನ..!, ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಬಡವರ ಸ್ಥಿತಿ ಬದಲಾಗಲಿಲ್ಲ ನೋಡಿ..!

929
Spread the love

ನ್ಯೂಸ್ ನಾಟೌಟ್: ಈ ಸರ್ಕಾರಗಳು ಹಾಗೆ ಸುಮ್ಮನೆ ಬಂದು ಹೋಗುತ್ತಿವೆ. ಉಳ್ಳವರು ಸರ್ಕಾರಿ ಜಮೀನಿಗೆ ಬೇಲಿ ಹಾಕಿದರೂ ಯಾರೂ ಮಾತನಾಡುವ ಧೈರ್ಯ ಮಾಡುವುದಿಲ್ಲ. ಆದರೆ ಬಡವರು ಒಂದು ಸೆಂಟ್ ಜಾಗಕ್ಕೆ ಬೇಲಿ ಹಾಕಿದರೂ ಅವರು ಕಾನೂನು ಕ್ರಮಕ್ಕೆ ಒಳಪಡುತ್ತಾರೆ. ಬಡವರು ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಬಡವರಾಗಿಯೇ ಉಳಿದಿದ್ದಾರೆ. ಶ್ರೀಮಂತರೂ ಮತ್ತಷ್ಟು ಗಂಟು ಕಟ್ಟಿ ಇಡುತ್ತಲೇ ಇದ್ದಾರೆ ಅನ್ನುವುದು ಕಟು ವಾಸ್ತವ.

ಇಲ್ಲಿ ನೋಡಿ ಕಳೆದ ಹಲವು ವರ್ಷಗಳಿಂದ ಕೊಡಗು ಜಿಲ್ಲೆಯ ಕರಿಕೆ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ಕಾಲೋನಿಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಕುಟುಂಬಗಳು ಸೂಕ್ತ ಸೂರಿಲ್ಲದೆ ಇಂದಿಗೂ ಪ್ಲಾಸ್ಟಿಕ್ ಹೊದಿಕೆಯಡಿಯಲ್ಲಿಯೇ ಜೀವನ ನಡೆಸಬೇಕಾದಂತಹ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ. ಇದು ಒಂದು ಕುಟುಂಬದ ಕಥೆಯಲ್ಲ ಇಂದಿಗೂ ಇಂತಹ ಹಲವಾರು ಕುಟುಂಬಗಳು ಕರಿಕೆ ಭಾಗದಲ್ಲಿ ಸಂಕಷ್ಟಕ್ಕೆ ಒಳಗಾಗಿವೆ.

 

View this post on Instagram

 

A post shared by News not out (@newsnotout)

ನಿವೇಶನದ ಹಕ್ಕು ಪತ್ರವೂ ಇಲ್ಲ ಮನೆಯೂ ಇಲ್ಲದೆ ಈ ಕುಟುಂಬದ ಸ್ಥಿತಿ ಇಂದಿಗೂ ಕರುಳು ಚುರುಕ್ ಅನ್ನುತ್ತವೆ. ನಿತ್ಯ ಕಚೇರಿಗೆ ಅಲೆದಾಡಿ ಹಕ್ಕು ಪತ್ರ ಮಾಡಿಸಿಕೊಳ್ಳಲು ಸಾಧ್ಯವಾಗದೆ ಕಣ್ಣೀರಿಡುವ ಸ್ಥಿತಿ ನಿರ್ಮಾಣವಾಗಿದೆ.

ಹಕ್ಕು ಪತ್ರವಿಲ್ಲದೆ ಮನೆ ಮಂಜೂರು ಮಾಡಿಕೊಡಲು ಆಗುವುದಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಹಾಗಾದರೆ ಆ ಹಕ್ಕು ಪತ್ರವನ್ನು ನೀಡಬೇಕಾದ ಜನ ಪ್ರತಿ ನಿಧಿಗಳು ಏನು ಮಾಡುತ್ತಿದ್ದಾರೆ ಎಂದು ತಿಳಿಯುತ್ತಿಲ್ಲ ಎಂದು ಕರಿಕೆ ಗ್ರಾಮದ ಸಾಮಾಜಿಕ ಕಾರ್ಯಕರ್ತ ಶಿವಗಿರಿ ರಾಜೇಶ್ ತಿಳಿಸಿದ್ದಾರೆ.

See also  ಮಡಿಕೇರಿ: ಸಾಲು ಸಾಲು ರಜೆ ಹಿನ್ನಲೆ ,ಕೊಡಗಿನ ಪ್ರವಾಸಿ ತಾಣಗಳಲ್ಲಿ ಜನವೋ ಜನ..!
  Ad Widget   Ad Widget   Ad Widget   Ad Widget   Ad Widget   Ad Widget