ಕರಾವಳಿ

ನೆಲ್ಯಾಡಿ: ನಾಪತ್ತೆಯಾಗಿರುವ ಪಿಗ್ಮಿ ಕಲೆಕ್ಟರ್ ಈಗ ಎಲ್ಲಿದ್ದಾನೆ..?

357
Spread the love

ನೆಲ್ಯಾಡಿ : ಇಲ್ಲಿನ ಸಹಕಾರ ಸಂಘವೊಂದರಲ್ಲಿ ಪಿಗ್ಮಿ ಸಂಗ್ರಾಹಕರಾಗಿದ್ದ ಕೌಕ್ರಾಡಿ ಗ್ರಾಮದ ದೋಂತಿಲ ನಿವಾಸಿ ಪ್ರವೀಣ್ ಕುಮಾರ್ ಅವರು ಕಳೆದ ಹದಿನೈದು ದಿನಗಳಿಂದ ನಾಪತ್ತೆಯಾಗಿದ್ದು ಆತನಿಗಾಗಿ ವ್ಯಾಪಕ ಹುಡುಕಾಟ ಆರಂಭವಾಗಿದೆ.

ಕಳೆದ ಹತ್ತಕ್ಕೂ ಹೆಚ್ಚು ವರ್ಷಗಳಿಂದ ಪಿಗ್ಮಿ ಸಂಗ್ರಾಹಕರಾಗಿದ್ದ ಇವರು ಚಿರಪರಿಚಿತರಾಗಿದ್ದು, ನೆಲ್ಯಾಡಿಯ ಹಲವಾರು ಜನರಿಂದ ಲಕ್ಷಾಂತರ ರೂ. ಸಾಲ ಪಡೆದುಕೊಂಡಿದ್ದ ಎನ್ನಲಾಗುತ್ತಿದೆ. ಸಾಲ ತೀರಿಸಲಾಗದೇ ನಾಪತ್ತೆಯಾಗಿರುವುದಾಗಿ ತಿಳಿದುಬಂದಿದೆ. ಇದರ ನಡುವೆ ಜ. 18ರಂದು ಓರ್ವ ಪತ್ರಕರ್ತರಿಗೆ ವಾಟ್ಸಾಪ್ ಮೂಲಕ ಕರೆಮಾಡಿದ ಇವರು, ನಾನು ಬಿಹಾರದಲ್ಲಿದ್ದು ಛೋಟಾ ರಾಜನ್ ಗ್ಯಾಂಗ್ ನ ಜಾಲದೊಳಗೆ ಸಿಲುಕಿರುವುದಾಗಿ ತಿಳಿಸಿದ್ದಾರೆ. ಇಲ್ಲಿನ ಅಡಿಕೆ ವ್ಯಾಪಾರಿಗಳು ಹಾಗೂ ಉದ್ಯಮಿಗಳಿಂದಲೂ ಲಕ್ಷಕ್ಕೂ ಮಿಕ್ಕಿ ಸಾಲ ಪಡೆದುಕೊಂಡು ಹಿಂತಿರುಗಿಸಲಾಗದೇ ನಾಪತ್ತೆಯಾಗಿದ್ದಾರೆ ಎಂದೂ ಹೇಳಲಾಗಿದೆ. ಅಲ್ಲದೇ ಚಿಟ್ ಫಂಡ್ ನಲ್ಲೂ ಕೆಲವರಿಗೆ ಮೋಸ ಆದ ದೂರುಗಳು ಕೇಳಿಬಂದಿದೆ. ಪ್ರವೀಣ್ ಕುಮಾರ್ ಜ. 03ರಿಂದ ನಾಪತ್ತೆಯಾಗಿದ್ದು, ಮೊಬೈಲ್ ಸ್ವಿಚ್ ಆಫ್ ಆಗಿದೆ. ಈ ಕುರಿತು ಮನೆಯವರು ಪೊಲೀಸರಿಗೆ ದೂರು ನೀಡಿದ್ದಾರೆ.

See also  ಸುಳ್ಯ: ಮೃತರ ಕುಟುಂಬಕ್ಕೆ 10 ಲಕ್ಷ ರೂ.ಪರಿಹಾರಕ್ಕೆ ಟಿ.ಎಂ. ಶಹೀದ್‌ ಆಗ್ರಹ
  Ad Widget   Ad Widget   Ad Widget   Ad Widget   Ad Widget   Ad Widget