ಕ್ರೈಂ

ನೆಲ್ಯಾಡಿ: ಆಕಸ್ಮಿಕ ಕೆರೆಗೆ ಬಿದ್ದು ಬಾಲಕಿ ಸಾವು

ನೆಲ್ಯಾಡಿ: ಇಲ್ಲಿನ ಕೊಣಾಲು ಗ್ರಾಮದ ಅಂಬರ್ಜೆ ಎಂಬಲ್ಲಿ ಬೆಳಗ್ಗೆ ಆಕಸ್ಮಿಕವಾಗಿ ಕೆರೆಗೆ ಬಿದ್ದು ಬಾಲಕಿ ಮೃತಪಟ್ಟ ಘಟನೆ ನಡೆದಿದೆ. ಮೃತಳನ್ನು ಅಂಬರ್ಜೆ ನಿವಾಸಿ ಮೋಹನ ಹಾಗೂ ವಿನೋದ ದಂಪತಿಯ ಪುತ್ರಿ ರಾಮಕುಂಜೇಶ್ವರ ಪ.ವೂ.ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಶ್ರೇಯಾ (18 ) ಎಂದು ಗುರುತಿಸಲಾಗಿದೆ. ಮನೆಯ ಸಮೀಪದ ಕೆರೆಗೆ ತಾವರೆ ಹೂ ಬಿಡಲೆಂದು ತೆರಳಿದ ವೇಳೆ ದುರ್ಘಟನೆ ಸಂಭವಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

Related posts

ಕಾಸರಗೋಡು : ವಿದ್ಯಾರ್ಥಿನಿಯ ನಿಗೂಢ ಸಾವು

15 ವರ್ಷದ ಹಿಂದೆ ಭೀಕರ ಉಗ್ರ ದಾಳಿಗೆ ಸಾಕ್ಷಿಯಾಗಿದ್ದ ಮುಂಬೈನ ತಾಜ್ ಹೋಟೆಲ್ ಗೆ ಬಾಂಬ್ ಬೆದರಿಕೆ..! ಪೊಲೀಸ್ ಕಂಟ್ರೋಲ್ ರೂಂಗೆ ಕರೆ..!

ಕಾಲಿಗೆ ಸರಪಳಿ ಹಾಕಿ ಕಾರ್ಮಿಕನನ್ನು ಜೀತಕ್ಕಿಟ್ಟದ್ಯಾರು..? ಏನಿದು ಅಮಾನವೀಯ ಘಟನೆ? ಪೊಲೀಸರು ಆತನನ್ನು ರಕ್ಷಿಸಿದ್ದೇಗೆ?