ಕರಾವಳಿ

ನೀಟ್ ಪರೀಕ್ಷೆ: ಪುತ್ತೂರಿನ ವಿದ್ಯಾರ್ಥಿನಿ ದೇಶಕ್ಕೆ ಎರಡನೇ ಸ್ಥಾನ

945

ಪುತ್ತೂರು: ರಾಷ್ಟ್ರೀಯ ವೈದ್ಯಕೀಯ ಪ್ರವೇಶ ಪರೀಕ್ಷೆ (ನೀಟ್)ಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ವಿದ್ಯಾರ್ಥಿನಿ ದೇಶಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ಅಂಗವೈಕಲ ಮೆಟ್ಟಿನಿಂತು ಸಿಂಚನಾ ಲಕ್ಷ್ಮಿ ಈ ಸಾಧನೆ ಮಾಡಿರುವುದು ವಿಶೇಷ.

ಅವರು ಅಂಗ ವೈಕಲ್ಯವುಳ್ಳವರ ವಿಭಾಗದಲ್ಲಿ ದೇಶಕ್ಕೆ ಎರಡನೇ ಸ್ಥಾನ ಪಡೆದಿದ್ದು ನೀಟ್ ಪರೀಕ್ಷೆಯಲ್ಲಿ ಒಟ್ಟು 720 ಕ್ಕೆ 658 ಅಂಕ ಪಡೆದುಕೊಂಡಿದ್ದಾರೆ. ಬಾಲ್ಯದಿಂದಲೂ ಬೆನ್ನು ಮೂಳೆ ಸಮಸ್ಯೆಯಿಂದ ಬಳಲುತ್ತಿರುವ ಸಿಂಚನಾ ಐದರಿಂದ ಒಂಭತ್ತನೇ ತರಗತಿ ತನಕದ ಅವಧಿಯಲ್ಲಿ ಸರಣಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು, ಎಲ್ಲ ಸವಾಲನ್ನೂ ಸ್ವೀಕರಿಸಿ ಅಖಿಲ ಭಾರತ ಮಟ್ಟದಲ್ಲಿ 2856 ನೇ ಸ್ಥಾನ ಪಡೆದಿದ್ದಾರೆ.

See also  ಜಾಲ್ಸೂರು: ವಿಷ ಸೇವಿಸಿ 80 ವರ್ಷದ ವೃದ್ದ ಆತ್ಮಹತ್ಯೆಗೆ ಯತ್ನ, ಆಸ್ಪತ್ರೆಗೆ ದಾಖಲು
  Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget