ಕ್ರೈಂ

ಕಾರಿಂಜದಲ್ಲಿ ಭೀಕರ ಕೊಲೆ, ಕ್ಷುಲ್ಲಕ ಕಾರಣಕ್ಕೆ ಸಂಬಂಧಿಯಿಂದಲೇ ಕೃತ್ಯ?

28

ಬೆಳ್ತಂಗಡಿ: ಕಾರಿಂಜದ ತೆಂಕ ಕಜೆಕಾರು ಕಾಡಿನಲ್ಲಿ ವ್ಯಕ್ತಿಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ವರದಿಯಾಗಿದೆ. ಹತ್ಯೆಗೀಡಾದವರನ್ನು ರಫೀಕ್‌ ಎಂದು ಗುರುತಿಸಲಾಗಿದೆ. ಕ್ಷುಲ್ಲಕ ಕಾರಣಕ್ಕೆ ಸಂಬಂಧಿಯೊಬ್ಬ ಹತ್ಯೆ ನಡೆಸಿದ್ದಾನೆ ಎಂದು ಹೇಳಲಾಗಿದೆ. ಹತ್ಯೆ ನಡೆದ ಸ್ಥಳ ಬಂಟ್ವಾಳದ ಪುಂಜಾಲ ಕಟ್ಟೆ ಬಾರ್ಡರ್ ಆಗಿದ್ದು ಪ್ರಕರಣ ಈಗಷ್ಟೇ ಬೆಳಕಿಗೆ ಬಂದಿದೆ. ಬೆಳ್ತಂಗಡಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.