ಬೆಂಗಳೂರು

ಅಪ್ಪನ ಕಾಮದಾಟ… ಮಗಳಿಗೆ ಪ್ರಾಣ ಸಂಕಟ, ಮಗಳ ಸ್ನೇಹಿತನಿಂದಲೇ ಅಪ್ಪನ ಹತ್ಯೆ

472
Spread the love

ಬೆಂಗಳೂರು: ಕೃಷಿ ವಿಶ್ವವಿದ್ಯಾಲಯ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ (ಜಿಕೆವಿಕೆ) ಭದ್ರತಾ ಸಿಬ್ಬಂದಿ ದೀಪಕ್ ಕುಮಾರ್ (46) ಎಂಬುವರನ್ನು ಅವರ ಮನೆಯಲ್ಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದ್ದು, ಮಗಳ ಸ್ನೇಹಿತನೇ ಕೃತ್ಯ ಎಸಗಿರುವ ಅನುಮಾನ ವ್ಯಕ್ತವಾಗಿದೆ.

ಮಗಳ ಮೇಲೆ ಲೈಂಗಿಕ ದೌರ್ಜನ್ಯ?

ಕೊಲೆಯಾದ ದೀಪಕ್ ಕುಮಾರ್ ಅವರಿಗೆ ಇಬ್ಬರು ಪತ್ನಿಯರು. ಒಬ್ಬರು ಬಿಹಾರದಲ್ಲಿದ್ದಾರೆ. ಇನ್ನೊಬ್ಬ ಪತ್ನಿ, ಬೆಂಗಳೂರಿನಲ್ಲೇ ಜೊತೆಯಲ್ಲಿದ್ದರು. ಅವರು ಸಹ ಇತ್ತೀಚೆಗೆ ಊರಿಗೆ ಹೋಗಿದ್ದರು. ಹೀಗಾಗಿ, ಇಬ್ಬರು ಹೆಣ್ಣು ಮಕ್ಕಳು ಮಾತ್ರ ಮನೆಯಲ್ಲಿದ್ದರು ಎಂದು ಪೊಲೀಸ್ ಮೂಲಗಳು ಹೇಳಿವೆ.

ಹಿರಿಯ ಮಗಳ ಮೇಲೆ ದೀಪಕ್ ಕುಮಾರ್ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದರೆಂಬ ಆರೋಪವಿದೆ. ದೌರ್ಜನ್ಯದಿಂದ ಬೇಸತ್ತ ಮಗಳು, ಕಾಲೇಜು ಸ್ನೇಹಿತನಿಗೆ ವಿಷಯ ತಿಳಿಸಿದ್ದರು. ಅದೇ ಸ್ನೇಹಿತ, ಸಹಚರರ ಜೊತೆ ಸೇರಿ ಕೃತ್ಯ ಎಸಗಿರುವ ಮಾಹಿತಿ ಇದೆ ಎಂದೂ ತಿಳಿಸಿವೆ.

ದೀಪಕ್‌ಕುಮಾರ್, ಭಾನುವಾರ ತಡರಾತ್ರಿಯೂ ಮಗಳ ಜೊತೆ ಅನುಚಿತವಾಗಿ ವರ್ತಿಸಿದ್ದರೆಂದು ಹೇಳಲಾಗಿದೆ. ಅದೇ ವಿಷಯವನ್ನು ಮಗಳು, ಸ್ನೇಹಿತನಿಗೆ ಕರೆ ಮಾಡಿ ತಿಳಿಸಿದ್ದರು. ಮಾರಕಾಸ್ತ್ರ ಸಮೇತ ಬೈಕ್ ನಲ್ಲಿ ಸ್ಥಳಕ್ಕೆ ಬಂದಿದ್ದ ಸ್ನೇಹಿತ ಹಾಗೂ ಇತರರು, ಮನೆಗೆ ನುಗ್ಗಿ ದೀಪಕ್ ಕುಮಾರ್ ಅವರನ್ನು ಕೊಂದಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ ಎಂದೂ ಹೇಳಿವೆ.

See also  ಮುಖ್ಯಮಂತ್ರಿಯಾದ ಖುಷಿಗೆ ಪತ್ನಿಯಿಂದ ಸಿದ್ದರಾಮಯ್ಯ ಅವರಿಗೆ ಸರ್ಪ್ರೈಸ್ ಗಿಫ್ಟ್‌!
  Ad Widget   Ad Widget   Ad Widget   Ad Widget   Ad Widget   Ad Widget