ಕ್ರೈಂ

ಬೆಂಕಿ ಹಚ್ಚಿಕೊಂಡು ತಾಯಿ ಆತ್ಮಹತ್ಯೆ , ಸಾವಿನ ಬಗ್ಗೆ ಸಂಶಯಪಟ್ಟ ಮಗಳು

423
Spread the love

ಕಾರ್ಕಳ: ಮೈಮೇಲೆ ಬೆಂಕಿ ಹಂಚಿಕೊಂಡು ತಾಯಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಾರ್ಕಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೃತರನ್ನು ಗೀತಾ (68) ಎಂದು ಗುರುತಿಸಲಾಗಿದೆ. ಸುರೇಂದ್ರ ಕುಡ್ವ ಹಾಗೂ ಗೀತಾ ದಂಪತಿ ಕಾರ್ಕಳ ಕುಂಟಲ್ಪಾಡಿಯ ಅತ್ರಿ ಅಪಾರ್ಟ್ ಮೆಂಟ್ ನಲ್ಲಿ ವಾಸವಾಗಿದ್ದರು. ಅವರ ಓರ್ವ ಮಗಳನ್ನು ಮೂಡುಬಿದ್ರೆಗೆ ಮದುವೆ ಮಾಡಿ ಕೊಟ್ಟಿದ್ದರು. ನ.6ರಂದು ಸುರೇಂದ್ರ ಕುಡ್ವ ಹತ್ತಿರದ ಫ್ಲಾಟ್ ನವರು ಮೂಡಬಿದ್ರೆಯಲ್ಲಿರುವ ಮಗಳಿಗೆ ಫೋನ್ ಮಾಡಿ ನಿಮ್ಮ ತಾಯಿಗೆ ಬೆಂಕಿಯಿಂದ ಸುಟ್ಟ ಗಾಯಗಳಾಗಿರುವುದಾಗಿ ತಿಳಿಸಿದರು.
ತಕ್ಷಣ ತಾಯಿ ಗೀತಾ ಅವರನ್ನು ಕಾರ್ಕಳ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸಿದ್ದಾರೆ. ಅದರಂತೆ ಅವರು ಕಾರ್ಕಳ ಆಸ್ಪತ್ರೆಗೆ ದಾಖಲಿಸಿದ್ದಾರೆ. ತಕ್ಷಣ ಆಸ್ಪತ್ರೆಗೆ ಬಂದು ಮಗಳು ತನ್ನ ತಾಯಿಯಲ್ಲಿ ವಿಚಾರಿಸಿದಾಗ ತಾನೇ ಬೆಂಕಿ ಹಚ್ಚಿಕೊಂಡೆ ಎಂದು ಅವರು ತಿಳಿಸಿದ್ದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ನ.07 ರಂದು ಬೆಳಿಗ್ಗೆ 05-30 ಗಂಟೆಗೆ ತಾಯಿ ಮೃತಪಟ್ಟಿದ್ದಾರೆ.ಈ ಬಗ್ಗೆ ಕಾರ್ಕಳ ಠಾಣೆಗೆ ದೂರು ನೀಡಿರುವ ಪುತ್ರಿ, ತನ್ನ ತಂದೆ ಸುಡುತ್ತಾ ಇರುವ ತನ್ನ ತಾಯಿಯನ್ನು ನೋಡಿಯೂ ಏನೂ ಮಾಡದೇ ಎದುರು ನಿಂತಿದ್ದಾರೆ.ಹೀಗಾಗಿ ತಂದೆಯ ಮೇಲೆ ಅನುಮಾನವಿದೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.

See also  ಕೊಡಗು: ಕನ್ನಡ ರಾಜ್ಯೋತ್ಸವದ ಸಂಭ್ರಮದ ಜೊತೆ ತಮಿಳು ಚಿತ್ರ ಪೋಸ್ಟರ್‌ಗಳಿಗೆ ಮಸಿ..! ಪೊಲೀಸರು ಬಂದು ಮಾಡಿದ್ದೇನು?
  Ad Widget   Ad Widget   Ad Widget   Ad Widget   Ad Widget   Ad Widget