ಬೆಂಗಳೂರು: ಪೊಲೀಸ್ ಕೇಸಿಗೆ ಹೆದರಿದ ಮಗ ಆತ್ಮಹತ್ಯೆಗೆ ಶರಣಾಗಿದ್ದು ಇತ್ತ ವಿಚಾರ ತಿಳಿದ ತಾಯಿಯೂ ಸೂಸೈಡ್ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ವಿಜಯನಗರದಲ್ಲಿ ನಡೆದಿದೆ. ಹದಿನೆಂಟು ವರ್ಷದ ಮಗ ಮೋಹನ್ ಗೌಡ ಬೈಕ್ ಕಳ್ಳತನದ ಕೇಸ್‌ವೊಂದರಲ್ಲಿ ಸಿಕ್ಕಿ ಹಾಕಿಕೊಂಡಿದ್ದ. ಪೊಲೀಸರು ವಿಚಾರಣೆಗೆ ಕರೆದಿದ್ದಾರೆ. ಇದಕ್ಕೆ ಹೆದರಿ ಆತ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆ ವೇಳೆಗಾಗಲೇ ಆತ ಸಾವಿಗೀಡಾಗಿದ್ದಾನೆ. ಈ ವಿಚಾರ ತಿಳಿದು ಆಸ್ಪತ್ರೆಗೆ ಬಂದ ತಾಯಿ ಲೀಲಾವತಿ ಮಗನ ಸಾವನ್ನು ಅರಗಿಸಿಕೊಳ್ಳಲಾಗದೆ ಎಲ್ಲರ ಎದುರು ಚಲಿಸುತ್ತಿದ್ದ ಕಾರಿಗೆ ತಲೆಕೊಟ್ಟು ಸಾವಿಗೀಡಾಗಿದ್ದಾರೆ. ಘಟನೆಯನ್ನು ಕಣ್ಣಾರೆ ಕಂಡ ಕುಟುಂಬ ಸಿಬ್ಬಂದಿ, ಪೊಲೀಸರು ಶಾಕ್ ಆಗಿದ್ದಾರೆ. ಒಂದೇ ಒಂದು ದುಡುಕಿನ ನಿರ್ಧಾರದಿಂದ ಎರಡು ಹೆಣ ಒಂದೇ ಮನೆಯಲ್ಲಿ ಬಿದ್ದದ್ದು ವಿಪರ್ಯಾಸವೇ ಸರಿ.