ಮಡಿಕೇರಿ: ಕೋವಿಡ್ ಆಸ್ಪತ್ರೆಗಳಲ್ಲಿನ ಎಡವಟ್ಟು ಮುಂದುವರಿದಿದೆ. ತಾಯಿ ಸತ್ತು ಹೋಗಿ 12 ದಿನವಾದರೂ ಆಕೆ ಬದುಕಿದ್ದಾರೆ ಎಂದು ಮಗನಿಗೆ ಆಸ್ಪತ್ರೆಯಿಂದ ಕರೆ ಮಾಡಿರುವ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ. ವಿರಾಜಪೇಟೆ ತಾಲೂಕಿನ ಕೊಟ್ಟೋಳಿ ಗ್ರಾಮದ ದೇವಕಿ ಜು.18ರಂದು ಕೋವಿಡ್ ನಿಂದ ಮೃತಪಟ್ಟಿದ್ದರು. 19ರಂದು ಸ್ವಗ್ರಾಮದಲ್ಲಿ ಅಂತ್ಯ ಸಂಸ್ಕಾರ ಕೂಡ ನಡೆಸಲಾಗಿತ್ತು. ಆದರೆ ಆ ನಂತರ ಎರಡು ಬಾರಿ ದೇವಕಿ ಐಸಿಯುನಲ್ಲಿದ್ದಾರೆಂದು ಮಗ ಪೊನ್ನಪ್ಪನಿಗೆ ಆಸ್ಪತ್ರೆ ಸಿಬ್ಬಂದಿ ಕರೆ ಮಾಡಿದ್ದಾರೆ.
previous post