Latestದೇಶ-ವಿದೇಶವಾಣಿಜ್ಯ

ಮೊಬೈಲ್‌ ಉದ್ಯಮಕ್ಕೆ ಕಾಲಿಟ್ಟ ಅಮೆರಿಕ ಅಧ್ಯಕ್ಷ..! ಟ್ರಂಪ್‌ ಹೆಸರಿನಲ್ಲಿ ಫೋನ್‌..!

5.2k

ನ್ಯೂಸ್ ನಾಟೌಟ್: ಐಫೋನ್‌ ಗಳನ್ನು (iPhone) ಅಮೆರಿಕದಲ್ಲಿ ಉತ್ಪಾದನೆ ಮಾಡುವಂತೆ ಆಪಲ್‌ ಗೆ ಸೂಚಿಸಿದ್ದ ಡೊನಾಲ್ಡ್‌ ಟ್ರಂಪ್‌ ಈಗ ಮೊಬೈಲ್‌ ಫೋನ್‌ ಮತ್ತು ವಯರ್‌ ಲೆಸ್‌ ಸೇವಾ ಉದ್ಯಮಕ್ಕೆ ಕಾಲಿಟ್ಟಿದ್ದಾರೆ. ಟ್ರಂಪ್‌ ಕುಟುಂಬ ಈಗ Trump Mobile T1 Phone ಹೆಸರಿನಲ್ಲಿ ಆಂಡ್ರಾಯ್ಡ್‌ ಫೋನ್‌ ಮಾರುಕಟ್ಟೆ ಬಿಡುಗಡೆ ಮಾಡಿದೆ.

ಚಿನ್ನದ ಬಣ್ಣದ ಫೋನ್‌ ಇದಾಗಿದ್ದು 499 ಡಾಲರ್‌ (ಅಂದಾಜು 43,000 ರೂ.) ದರವನ್ನು ನಿಗದಿ ಮಾಡಲಾಗಿದೆ. ಈ ಫೋನನ್ನು ಅಮೆರಿಕದಲ್ಲೇ ಉತ್ಪಾದನೆ ಮಾಡಲಾಗಿದೆ ಎಂದು ಕಂಪನಿ ತಿಳಿಸಿದೆ. The Trump Organization ನಲ್ಲಿ ಎರಿಕ್‌ ಟ್ರಂಪ್‌ ಮತ್ತು ಡೊನಾಲ್ಡ್‌ ಟ್ರಂಪ್‌ ಕಾರ್ಯನಿರ್ವಾಹಕ ಉಪಾಧ್ಯಕ್ಷರಾಗಿದ್ದಾರೆ.

T1 ಮೊಬೈಲ್ ಸೇವೆಯು ʼ47 ಪ್ಲಾನ್ʼ ಹೆಸರಿನ ಸೇವೆಯನ್ನು ನೀಡುತ್ತಿದೆ. ಟ್ರಂಪ್‌ ಅಮೆರಿಕದ 47ನೇ ಅಧ್ಯಕ್ಷರಾಗಿದ್ದಾರೆ. ಈ ಕಾರಣಕ್ಕೆ ಈ ಸೇವೆಗೆ 47 ಪ್ಲಾನ್‌ ಎಂಬ ಹೆಸರನ್ನು ಇಡಲಾಗಿದೆ
ಹಿಂದುಗಡೆ 50 ಎಂಪಿ (ವೈಡ್‌), 2 ಎಂಪಿ(ಮ್ಯಾಕ್ರೋ), 2 ಎಂಪಿ(ಡೆಪ್ತ್)‌ ಕ್ಯಾಮೆರಾವನ್ನು ನೀಡಲಾಗಿದೆ. ಮುಂದುಗಡೆ 16 ಎಂಪಿ ಕ್ಯಾಮೆರಾವನ್ನು ಹೊಂದಿದೆ. ಫೋನಿಗೆ ಫಿಂಗರ್‌ ಪ್ರಿಂಟ್‌ ಸ್ಕ್ಯಾನರ್‌ ಜೊತೆ 5000 mAh ಬ್ಯಾಟರಿಯನ್ನು ನೀಡಲಾಗಿದೆ.

ವಾಟ್ಸಾಪ್ ನಲ್ಲೂ ಇನ್ನು ಮುಂದೆ ಜಾಹಿರಾತು ಪ್ರದರ್ಶನ..! ಇಲ್ಲಿದೆ ಸಂಪೂರ್ಣ ಮಾಹಿತಿ

ಮಗುವಿನ ಎದುರೇ ಅಮ್ಮನನ್ನು ಮರಕ್ಕೆ ಕಟ್ಟಿ ಥಳಿಸಿದ ಜನ..! ಗಂಡ ಸಾಲದ ತೀರಿಸದ್ದಕ್ಕೆ ಹೆಂಡತಿಗೆ ಶಿಕ್ಷೆ, ಆರೋಪಿ ಅರೆಸ್ಟ್..!

See also  ಲೆಕ್ಕಪತ್ರ ವಿಚಾರಕ್ಕೆ ಚರ್ಚ್‍ನಲ್ಲಿ ಎರಡು ಗುಂಪುಗಳ ನಡುವೆ ಹೊಡೆದಾಟ..! ಮಧ್ಯಪ್ರವೇಶಿಸಿದ ಪೊಲೀಸರು..!
  Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget