Latestಕರಾವಳಿಪುತ್ತೂರುಮಂಗಳೂರು

ಮಂಗಳೂರು ವಿಮಾನ ನಿಲ್ದಾಣದ ಜಾಗ ಖರೀದಿಗೆ ಕಾಯಕಲ್ಪ, ಶಾಸಕ ಅಶೋಕ್ ರೈ ಪ್ರಸ್ತಾಪಕ್ಕೆ ಸಿಕ್ಕ ಜಯ

1.1k

ನ್ಯೂಸ್ ನಾಟೌಟ್: ಪುತ್ತೂರು ಶಾಸಕ ಅಶೋಕ್ ರೈ ಒಂದಲ್ಲ ಒಂದು ವಿಚಾರದಲ್ಲಿ ಜನಪರ ನಿಲುವಿನಿಂದಲೇ ಸದ್ದಾಗುತ್ತಿದ್ದಾರೆ. ಅಭಿವೃದ್ದಿಯ ಮೂಲಕವೇ ಟೀಕಾಕಾರರಿಗೆ ತಕ್ಕ ಉತ್ತರ ನೀಡುತ್ತಿದ್ದಾರೆ. ಇದೀಗ ಮಂಗಳೂರು ವಿಮಾನ ನಿಲ್ದಾಣದ ರವ್ ವೇ ಜಾಗ ಖರೀದಿಸುವಂತೆ ವಿಧಾನ ಸಭೆಯಲ್ಲಿ ಅವರು ಗಮನ ಸೆಳೆದ ಪ್ರಸ್ತಾಪಕ್ಕೆ ದೊಡ್ಡ ಗೆಲುವು ಸಿಕ್ಕಿದೆ.

ವಿಧಾನ ಸಭೆಯಲ್ಲಿ ಶಾಸಕರು ಹೇಳಿದ್ದೇನು..?

ಬಜ್ಪೆ ವಿಮಾನ ನಿಲ್ದಾಣದಲ್ಲಿ ರಿಸ್ಕ್ ಇದೆ. ದೊಡ್ಡ ವಿಮಾನ ನಮ್ಮಲ್ಲಿ ಲ್ಯಾಂಡ್ ಆಗುತ್ತಿಲ್ಲ.15 ವರ್ಷಗಳ ಹಿಂದೆ ವಿಮಾನ ಲ್ಯಾಂಡ್ ಆಗುವಾಗ ರನ್‌ವೇಯಿಂದ ಹೊರಗೆ ಬಂದು ಕಣಿವೆಗೆ ಬಿದ್ದು ಕ್ರ್ಯಾಶ್ ಆಗಿರುವುದಕ್ಕೆ ರನ್‌ವೇ ಕೊರತೆ ಕಾರಣ. ನಾನು ಮೊನ್ನೆ ಬಂದ ವಿಮಾನ ಕೂಡ ರನ್ ವೇಯಲ್ಲಿ ಲ್ಯಾಂಡ್ ಆಗಬೇಕಾಗಿತ್ತು. ಆದರೆ ರನ್ ವೇ ಮಾರ್ಕ್‌ನಿಂದ ಮುಂದೆ ಹೋಗಿದೆ. ಅದು ಸೆಕೆಂಡಿಗೆ 350 ಕಿ.ಮೀ.ವೇಗದಲ್ಲಿತ್ತು.1 ಸೆಕೆಂಡು ಕಡಿಮೆ ಆದಾಗ ವಿಮಾನ ಸುಮಾರು 100ಕಿ.ಮೀ ಮುಂದೆ ಹೋಗಿ ಆಗಿರುತ್ತದೆ. ಹಾಗೆ ಮತ್ತೆ ಲ್ಯಾಂಡ್ ಆದರೆ ಮುಂದೆ ಹೋಗಲು ಜಾಗವೇ ಇರುವುದಿಲ್ಲ.ಮೊನ್ನೆ ನಮ್ಮ ವಿಮಾನ ಕೂಡಾ ಅದೇ ರೀತಿ ಆಗಿದೆ.

ನಾನು ಮತ್ತು ಖಾದರ್ ಮೆತ್ತಿತರರು ವಿಮಾನದಲ್ಲಿದ್ದೆವು. ವಿಮಾನ ಲ್ಯಾಂಡ್ ಆದಾಗ ಮಾರ್ಕ್‌ನಿಂದ ಮುಂದೆ ಲ್ಯಾಂಡ್ ಆಗಿರುವ ವಿಚಾರ ಪೈಲೆಟ್ ಗೆ ಗೊತ್ತಾಗಿ ಕೂಡಲೇ ಮೇಲಕ್ಕೆ ಹಾರಿಸಿದ್ದಾರೆ. ಒಂದು ಸುತ್ತು ಹಾಕಿ ಮತ್ತೆ ಸುರಕ್ಷಿತವಾಗಿ ಇಳಿದಿದೆ ಎಂದು ತನಗಾದ ಆತಂಕಕಾರಿ ಅನುಭವವನ್ನು ಶಾಸಕರು ಹಂಚಿಕೊಂಡಿದ್ದಾರೆ.ರೂ.50 ಕೋಟಿ ನೀಡಲು ಸಿದ್ಧ: ಅಧಾನಿ ಗ್ರೂಪ್ಬಜ್ಜೆ ವಿಮಾನ ನಿಲ್ದಾಣ ರನ್ ವೇ ಬಹಳ ಕಡಿಮೆ ಇದೆ. ಕನಿಷ್ಟ ಪಕ್ಷ 3.5 ಕಿ.ಮೀ ರನ್‌ವೇ ಬೇಕು.

ಆದರೆ ಇಲ್ಲಿ 2.6 ಕಿ.ಮೀ ರನ್ ವೇ ಇದೆ. ಹಾಗಾಗಿ ರನ್‌ವೇ ವಿಸ್ತರಣೆಗೆ ಸರ್ಕಾರ 32 ಎಕ್ರೆ ಜಾಗವನ್ನು ಅಕ್ಟೇರ್ ಮಾಡಲು ಯೋಜನೆ ರೂಪಿಸಿದೆ.ಇದರಲ್ಲಿ 10 ಎಕ್ರೆ ಸರ್ಕಾರದ್ದು. ಅದನ್ನು ಸರಕಾರ ಉಚಿತವಾಗಿ ನೀಡುತ್ತದೆ.ಉಳಿದ 22 ಎಕ್ರೆ ಜಾಗವನ್ನು ಖರೀದಿಸಬೇಕು. ಹೆಚ್ಚುವರಿ ಜಾಗವನ್ನು ಖರೀದಿಸಲು ರೂ.50 ಕೋಟಿಯನ್ನು ನೀಡುವುದಾಗಿ ವಿಮಾನ ನಿಲ್ದಾಣವನ್ನು ಲೀಸ್ ಗೆ ಪಡೆದುಕೊಂಡಿರುವ ಅಧಾನಿ ಗ್ರೂಪ್ ಒಪ್ಪಿಗೆ ಸೂಚಿಸಿದೆ.

See also  ಕರ್ನಾಟಕದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಕಾನೂನಾತ್ಮಕ ಬ್ರೇಕ್..! ಸುಗ್ರೀವಾಜ್ಞೆಗೆ ಕೊನೆಗೂ ಒಪ್ಪಿದ ರಾಜ್ಯಪಾಲರು
  Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget