ಕ್ರೈಂ

ಕಾಡು ಹಂದಿಯೆಂದು ಯುವಕನಿಗೆ ಗುಂಡಿಟ್ಟ ಬೇಟೆಗಾರರು, ಯುವಕನ ಸ್ಥಿತಿ ಗಂಭೀರ

978

ಮಂಡ್ಯ: ಕಾಡುಹಂದಿ ಬೇಟೆಗೆ ಬಂದಿದ್ದ ಹವ್ಯಾಸಿ ಬೇಟೆಗಾರರು ಹೊಡೆದ ಗುಂಡು ಯುವಕನೊಬ್ಬನಿಗೆ ತಾಗಿರುವ ಘಟನೆ ಮಂಡ್ಯದಲ್ಲಿ ನಡೆದಿದೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮೇಳಾಪುರ ಗ್ರಾಮದ ಹೊರವಲಯದಲ್ಲಿ ಈ ದುರಂತ ಸಂಭವಿಸಿದೆ. ಮಾದೇಶ (25) ಎಂಬ ಯುವಕ ಗುಂಡೇಟು ತಗುಲಿಸಿಕೊಂಡಿರುವವರಾಗಿದ್ದಾರೆ. ಮೈಸೂರು ಜಿಲ್ಲೆಯ 6 ಮಂದಿ ಯುವಕರ ತಂಡ ಬೇಟೆಗೆ ಬಂದಿತ್ತು. ನಾಡಬಂದೂಕು ಬಳಸಿ ಕಾಡುಹಂದಿ ಬೇಟೆಗೆ ಈ ತಂಡ ಬಂದಿತ್ತು. ಮಾದೇಶ ಅವರ ಕಬ್ಬಿನ ಗದ್ದೆಯಲ್ಲಿ ಹಂದಿಗಾಗಿ ತಂಡ ಶೋಧ ನಡೆಸುತ್ತಿತ್ತು. ಈ ಸಮಯದಲ್ಲಿ ಅದೇ ಗದ್ದೆಯ ಬದಿಯಲ್ಲಿ ಮಾದೇಶ ಹುಲ್ಲು ಕೊಯ್ಯುತ್ತಿದ್ದ. ಕಬ್ಬಿನ ಗರಿಗಳು ಅಲುಗಾಡುತ್ತಿದ್ದನ್ನು ಗಮನಿಸಿದ ತಂಡ ಹಂದಿ ಇರಬಹುದು ಎಂದುಕೊಂಡು ಫೈರಿಂಗ್ ಮಾಡಿದೆ. ಇದು ಮಾದೇಶನಿಗೆ ತಗುಲಿದೆ.

See also  500 ರೂಪಾಯಿ ಚಲನ್‌  ತಪ್ಪಿಸಲು ಪ್ರೀತಿಸಿದ ಹುಡುಗಿನ್ನೇ ನೆಲಕ್ಕುರುಳಿಸಿ ಹೋದ ಯುವಕ..! ಮುಂದೇನಾಯ್ತು..? ಇಲ್ಲಿದೆ ವಿಡಿಯೋ ವೈರಲ್!
  Ad Widget   Ad Widget   Ad Widget   Ad Widget   Ad Widget   Ad Widget   Ad Widget