ನ್ಯೂಯಾರ್ಕ್: ಜೀವನದಲ್ಲಿ ಜಿಗುಪ್ಸೆಗೊಂಡು ಮಾಜಿ ಮಿಸ್ ಅಮೆರಿಕ ಚೆಸ್ಲಿ ಕ್ರಿಸ್ಟ್ (30) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನ್ಯೂಯಾರ್ಕ್ ನ ಮ್ಯಾನ್ ಹ್ಯಾಟನ್ ಪ್ರದೇಶದ ಕಟ್ಟಡವೊಂದರಿಂದ ಜಿಗಿದು ಚೆಸ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲವಾದರೂ ಜೀವನದಲ್ಲಿ ಜಿಗುಪ್ಸೆಗೊಂಡಿದ್ದರು ಎಂದು ಕುಟುಂಬದವರು ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ. 30 ವರ್ಷದ ಈ ಮಾಡೆಲ್ 2019 ರಲ್ಲಿ ಮಿಸ್ ಯುಎಸ್ಎ ಗೆದ್ದಿದ್ದರು. ಚೆಸ್ಲಿ ನಿಧನದಿಂದ ನಮಗೆ ತೀವ್ರ ಆಘಾತವಾಗಿದೆ ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ.