ಕರಾವಳಿ

ಅಪರೂಪದ ಸುಳಿಗಾಳಿ: ಕೊಕ್ಕಡ ಸಮೀಪದ ಕೌಕ್ರಾಡಿ ಗ್ರಾಮದ ಮೂಡುಬೈಲಿನಲ್ಲಿ ಅಪಾರ ಹಾನಿ

ಕೊಕ್ಕಡ: ಅಪರೂಪದ ಭಾರಿ ಸುಳಿಗಾಳಿಗೆ ಕೊಕ್ಕಡ ಸಮೀಪದ ಕೌಕ್ರಾಡಿ ಗ್ರಾಮದಲ್ಲಿ ಅಡಿಕೆ ,ರಬ್ಬರ್ ಮರಗಳು ಧರೆಗುರುಳಿದ ಘಟನೆ ನಡೆದಿದೆ. ಸುಳಿಗಾಳಿಯ ತೀವ್ರತೆಗೆ ಮೂಡುಬೈಲಿನ ಲಕ್ಷ್ಮಣ ಗೌಡ ಅವರ ಮನೆಗೆ ತೀವ್ರ ಹಾನಿಯಾಗಿದೆ. ಘಟನೆಯಿಂದ ಅಪಾರ ನಷ್ಟ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಅಪರೂಪದ ಸುಳಿಗಾಳಿ

ಈ ರೀತಿಯ ಸುಳಿಗಾಳಿ ಕೊಕ್ಕಡ ಗ್ರಾಮದಲ್ಲಿ ಮಾತ್ರವೇ ಕಂಡು ಬಂದಿದ್ದು ವಿಶೇಷವಾಗಿತ್ತು. ಈ ಬಗ್ಗೆ ನ್ಯೂಸ್ ನಾಟೌಟ್ ಗೆ ಪ್ರತಿಕ್ರಿಯಿಸಿದ ಪವಿತ್ರ ಮೂಡುಬೈಲು’ ಸಂಜೆ ಹೊತ್ತಿಗೆ ಮಳೆ ಬರುತ್ತಿತ್ತು. ಇದ್ದಕ್ಕಿದ್ದ ಹಾಗೆ ಒಮ್ಮೆಲೆ ಸುಳಿಗಾಳಿ ಬೀಸಿತು. ಸುರುಳಿಯಾಕಾರದಲ್ಲಿ ಬೀಸಿ ಬಂದ ಗಾಳಿಗೆ ನಾವೆಲ್ಲ ಬೆಚ್ಚಿ ಬಿದ್ದಿದ್ದು ಮನೆಯಿಂದ ಹೊರಬಂದೆವು. ಸ್ವಲ್ಪ ಹೊತ್ತಲ್ಲೇ ಮನೆಯ ಮೇಲ್ಚಾವಣಿ ಕುಸಿದು ಬಿತ್ತು. ಇಷ್ಟು ಮಾತ್ರವಲ್ಲದೇ ಮೂಡುಬೈಲಿನ ನೂರಾರು ಅಡಿಕೆ ಮರಗಳು ಧರಶಾಹಿಯಾಗಿವೆ. ರಬ್ಬರ್ ಗಿಡಗಳಿಗೂ ಹಾನಿಯಾಗಿದ್ದು ಅಪಾರ ನಷ್ಟವಾಗಿದೆ ಎಂದರು.

Related posts

ಧರ್ಮಸ್ಥಳದ ಹಿರಿಯ ಆನೆ ಲತಾ ಇನ್ನಿಲ್ಲ..!ಮಹಾಶಿವರಾತ್ರಿಯಂದೇ ಕೊನೆಯುಸಿರೆಳೆದ ಆನೆಗೆ ಆಗಿದ್ದೇನು?

ಕರಾವಳಿಯ ದೇಗುಲಗಳಲ್ಲಿ ಮುಂದುವರಿದ ವ್ಯಾಪಾರ ಧರ್ಮ ದಂಗಲ್..! ಕುಕ್ಕೆ ಸುಬ್ರಹ್ಮಣ್ಯದಲ್ಲಿ ಈ ವರ್ಷವೂ ಅನ್ಯಮತೀಯರ ವ್ಯಾಪಾರಕ್ಕೆ ಬಹಿಷ್ಕಾರ..!

ಗ್ರಾಮ ಪಂಚಾಯತ್ ಮಹಿಳೆಯರ ರಾಜ್ಯಮಟ್ಟದ ಸಾಧನೆ, ಕ್ರೀಡಾ ಕ್ಷೇತ್ರದಲ್ಲಿ ಹಳ್ಳಿ ಪ್ರತಿಭೆಗಳು ಮಿಂಚುವ ಸಮಯ