Latestಕ್ರೈಂರಾಜಕೀಯವೈರಲ್ ನ್ಯೂಸ್

MBBS ವಿದ್ಯಾರ್ಥಿಗಳಿಗೆ 80 ಕೋಟಿ ರೂ. ಸ್ಕಾಲರ್‌ ಶಿಪ್‌ ನೀಡದೆ ವಂಚನೆ..! ಮುಖಂಡನ ಮನೆ ಮೇಲೆ ಇಡಿ ದಾಳಿ..!

313

ನ್ಯೂಸ್‌ ನಾಟೌಟ್: ಎಂಆರ್‌ ಎಂಸಿ ಮೆಡಿಕಲ್ ಕಾಲೇಜಿನ ಶಿಷ್ಯವೇತನ ಹಗರಣದ ಸಂಬಂಧ ಕಾಂಗ್ರೆಸ್ ಮುಖಂಡ ಹೆಚ್‍ ಕೆಇ ಸೊಸೈಟಿ ಮಾಜಿ ಅಧ್ಯಕ್ಷನ ಮನೆ ಮೇಲೆ ಇಡಿ ದಾಳಿ ನಡೆಸಿದೆ.

ಕಲಬುರಗಿಯ ರಿಂಗ್ ರಸ್ತೆಯಲ್ಲಿರುವ ಭೀಮಾಶಂಕರ್ ಬಿಲಗುಂದಿ ಎಂಬವರ ಮನೆ ಮೇಲೆ ನಾಲ್ವರು ಅಧಿಕಾರಿಗಳ ತಂಡ ದಾಳಿ ಮಾಡಿದೆ. ಎಂಆರ್‌ ಎಂಸಿ ಮೆಡಿಕಲ್ ಕಾಲೇಜ್ ಶಿಷ್ಯವೇತನ ಹಗರಣ ವಿಚಾರವಾಗಿ ಈ ದಾಳಿ ನಡೆದಿದೆ ಎಂದು ವರದಿ ತಿಳಿಸಿದೆ.

2018 ರಿಂದ 2024ರ ವರೆಗೆ ಎರಡು ಅವಧಿಗೆ ಭೀಮಾಶಂಕರ್ ಅಧ್ಯಕ್ಷನಾಗಿದ್ದ ಎನ್ನಲಾಗಿದೆ. 700 ಜನ ಎಂಬಿಬಿಎಸ್‌ (MBBS) ವಿದ್ಯಾರ್ಥಿಗಳಿಗೆ ಶಿಷ್ಯವೇತನ ಹಣ ಕೊಡದೆ ವಂಚಿಸಲಾಗಿದೆ ಎಂದು ಆರೋಪಿಸಲಾಗಿದೆ. ಸುಮಾರು 80 ಕೋಟಿ ರೂ.ಗೂ ಅಧಿಕ ಹಣ ನೀಡದೆ ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ.

ಭೀಮಾಶಂಕರ್ ಮನೆ ಮೇಲೆ ದಾಳಿ ಮಾಡಿರುವ ಅಧಿಕಾರಿಗಳು, ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ.

ಪಹಲ್ಗಾಮ್ ದಾಳಿಯ ಹಿಂದಿನ ದಿನ ಉಗ್ರ ನನ್ನೊಂದಿಗೆ ಮಾತನಾಡಿದ್ದ ಎಂದ ಮಹಾರಾಷ್ಟ್ರದ ವ್ಯಕ್ತಿ..! ಎಲ್ಲ ಮಾಹಿತಿಯನ್ನು NIA ಗೆ ಇಮೇಲ್ ಮಾಡಿದ್ದೇನೆ ಎಂದ ಯುವಕ..!

ಪಾಕ್ ಪರ ಯಾರೇ ಘೋಷಣೆ ಕೂಗಿದ್ರೂ ತಪ್ಪು, ಅದು ದೇಶದ್ರೋಹ ಎಂದ ಸಿಎಂ ಸಿದ್ದರಾಮಯ್ಯ..! ಮಂಗಳೂರಿನ ಪ್ರಕರಣಕ್ಕೆ ಪ್ರತಿಕ್ರಿಯೆ

See also  ಕನಕಮಜಲು: ತಡರಾತ್ರಿ ಹಿಂಬದಿಯ ಬಾಗಿಲು ಮುರಿದು ಮನೆಗೆ ನುಗ್ಗಿದ ಕಳ್ಳರು, ಮನೆಯಲ್ಲಿದ್ದ ಚಿನ್ನಾಭರಣ ಕಳವು
  Ad Widget   Ad Widget   Ad Widget   Ad Widget