ತೊಡಿಕಾನ: ಸುಳ್ಯ ಸೀಮೆಯ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಇಂದು ವಿಪತ್ತು ನಿರ್ವಹಣಾ ಘಟಕ ಸಂಪಾಜೆ ಹಾಗೂ ಸುಳ್ಯ ಘಟಕ ಮತ್ತು ಯುವ ಬ್ರಿಗೇಡ್ ಸುಳ್ಯ ಇದರ ಸದಸ್ಯರಿಂದ ಮತ್ಸ್ಯ ತೀರ್ಥ ನದಿಯ ಸ್ವಚ್ಛತಾ ಕಾರ್ಯ ಜರುಗಿತು.ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾದ ಕಿಶೋರ್ ಕುಮಾರ್ ಉಳುವಾರು ಹಾಗೂ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಉಮಾಶಂಕರ್ ಮತ್ತು ಚಂದ್ರ ಪ್ರಕಾಶ್ ಪಾಣತ್ತಿಲ ಮತ್ತಿತರರು ಉಪಸ್ಥಿತರಿದ್ದರು.