ಕ್ರೈಂಬೆಂಗಳೂರು

ತನ್ನ ಪ್ರಿಯಕರ ನನಗೆ ಮದುವೆಯಾಗಿದೆ ಎಂದದ್ದಕ್ಕೆ ಬಿಸಿನೀರು ಎರಚಿದ ವಿವಾಹಿತೆ..! ಬರ್ತಡೇ ಇದೆ ಬಾ ಎಂದು ಕರೆದಾಕೆ ಮಾಡಿದ್ದಳು ಖತರ್ನಾಕ್ ಪ್ಲಾನ್!

254

ನ್ಯೂಸ್ ನಾಟೌಟ್ :  ಮದುವೆಯಾಗಲು ನಿರಾಕರಿಸಿದ್ದಕ್ಕೆ ಪ್ರಿಯಕರನ ಮೇಲೆ ಯುವತಿಯೊಬ್ಬಳು ಬಿಸಿ ನೀರು ಎರಚಿ ಚರ್ಮ ಸುಟ್ಟುಹೋದ ಘಟನೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಮೇ 26ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಕಲಬುರಗಿ ಜಿಲ್ಲೆ ಅಫಜಲಪುರ ಮೂಲದ ಮಹಿಳೆಯಿಂದ ಈ ಕೃತ್ಯ ನಡೆದಿದೆ ಎಂದು ವರದಿ ತಿಳಿಸಿದೆ. ಗಾಯಾಳು ವಿಜಯ್ ಶಂಕರ್(30) ಗುಲ್ಬರ್ಗಾ ಜಿಲ್ಲೆಯ ಅಫ್ಜಲ್ಪುರದವನು. ಚಾಮರಾಜಪೇಟೆಯ ಬೋರೋ ಕ್ಲಾತಿಂಗ್ ಎಂಬಲ್ಲಿ ಫೋಟೋ ಎಡಿಟಿಂಗ್ ಕೆಲಸ ಮಾಡಿಕೊಂಡಿದ್ದ. ಸುಮಾರು 4 ವರ್ಷದ ಹಿಂದೆ ಅಫ್ಜಲಪುರದ ದೇಸಾಯಿ ಕಲ್ಲೂರಿನ ಜ್ಯೋತಿ ದೊಡ್ಡಮನಿ ಪರಿಚಯವಾಗಿದ್ದಾಳೆ.

ತನಗೆ ಮದುವೆ ಆಗಿರುವುದನ್ನು ಜ್ಯೋತಿ ಮುಚ್ಚಿಟ್ಟಿದ್ದು, ವಿಜಯ್ ಶಂಕರ್ ಜೊತೆಗೆ ಪ್ರಣಯ ಪ್ರಸಂಗ ಮುಂದುವರಿಸಿದ್ದಳು. ಜ್ಯೋತಿಗೆ ಮದುವೆಯಾಗಿರುವ ವಿಚಾರ ವಿಜಯ್‌ಗೆ 2 ವರ್ಷಗಳ ಹಿಂದೆ ಗೊತ್ತಾಗಿದ್ದು, ನಂತರ ಜ್ಯೋತಿಯನ್ನು ಅವಾಯ್ಡ್ ಮಾಡಲು ಶುರು ಮಾಡಿದ್ದ. 7 ತಿಂಗಳ ಹಿಂದೆ ಚಾಮರಾಜಪೇಟೆ ಎಂ.ಡಿ ಬ್ಲಾಕ್‌ನಲ್ಲಿ ರೂಮ್ ಬಾಡಿಗೆ ಪಡೆದು ವಾಸವಾಗಿದ್ದ. ನಂತರ ಬೆಂಗಳೂರಿಗೆ ಬಂದು ಬೃಂದಾವನ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಜ್ಯೋತಿಗೆ ವಿಜಯ್ ತನ್ನ ರೂಮನ್ನು ಬಿಟ್ಟುಕೊಟ್ಟಿದ್ದ. ತನ್ನ ಸ್ನೇಹಿತನ ಜೊತೆ ಬೊಮ್ಮಸಂದ್ರದ ಹೆರಾಂಡಳ್ಳಿಯಲ್ಲಿ ವಾಸವಾಗಿದ್ದ ಎಂದು ವರದಿ ತಿಳಿಸಿದೆ.

ಮೇ 5ರಂದು ರೇಖಾ ಎಂಬಾಕೆಯನ್ನು ಮದುವೆಯಾಗುವುದಾಗಿ ಜ್ಯೋತಿಗೆ ತಿಳಿಸಿದ್ದ ವಿಜಯ್. ಆದರೆ ಇದು ಜ್ಯೋತಿಗೆ ಇಷ್ಟವಿರಲಿಲ್ಲ. ಮೇ 5ರಂದು ಮದುವೆಯಾಗಿ 23ರಂದು ವಾಪಸ್ ಬೆಂಗಳೂರಿಗೆ ಬಂದಿದ್ದ ವಿಜಯ್ ಗೆ 25ರಂದು ಸಂಜೆ 4 ಗಂಟೆಗೆ ಜ್ಯೋತಿ ಕರೆ ಮಾಡಿ ರೂಮಿಗೆ ಕರೆಸಿಕೊಂಡಿದ್ದಳು. ತನ್ನ ಬರ್ತ್‌ಡೇ ಸಿದ್ಧತೆಗೆ ರೂಮಿಗೆ ಬರುವಂತೆ ತಿಳಿಸಿದ್ದಳು.

ರಾತ್ರಿ 7 ಗಂಟೆಗೆ ರೂಮಿಗೆ ಬಂದಿದ್ದ ವಿಜಯ್, ಅಲ್ಲಿಂದಲೇ ತನ್ನ ಪತ್ನಿಗೆ ಫೋನ್‌ ಮಾಡಿ ಸುಮಾರು 1 ಗಂಟೆ ಮಾತನಾಡಿದ್ದ. ಇನ್ನು ತನ್ನಿಂದ ದೂರವಿರುವಂತೆ ಜ್ಯೋತಿಗೆ ಬೋಧಿಸಿದ್ದ. ಇದರಿಂದ ಕೆರಳಿದ್ದ ಜ್ಯೋತಿ, ಮೇ 26ರ ಬೆಳಗಿನ ಜಾವ ವಿಜಯ್ ಮಲಗಿದ್ದ ಸಮಯದಲ್ಲಿ ಕುದಿಯುವ ನೀರು ತಂದು ಆತನ ಮೈಮೇಲೆ ಸುರಿದಿದ್ದಾಳೆ.

ಬಿಯರ್ ಬಾಟಲಿಯಿಂದ ಆತನ ಮುಖಕ್ಕೆ ಹೊಡೆದು, ಮನೆ ಲಾಕ್ ಮಾಡಿಕೊಂಡು ಜ್ಯೋತಿ ಅಲ್ಲಿಂದ ಪರಾರಿಯಾಗಿದ್ದಾಳೆ ಎನ್ನಲಾಗಿದೆ. ವಿಜಯ್‌ಗೆ ಶೇ.40-50% ಸುಟ್ಟ ಗಾಯಗಳಾಗಿವೆ. ನಂತರ ಆತನ್ನು ವಿಕ್ಟೋರಿಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಘಟನೆ ಸಂಬಂಧ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಮತ್ತು ತನಿಖೆ ಪ್ರಗತಿಯಲ್ಲಿದೆ.

See also  ಮಹಿಳಾ ಹಾಸ್ಟೆಲ್ ​ನಲ್ಲಿದ್ದ 47 ವಿದ್ಯಾರ್ಥಿನಿಯರು ದಿಢೀರ್ ಅಸ್ವಸ್ಥ..! ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿಯರಿಗೇನಾಯ್ತು..?
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget