ಸಂಪಾಜೆ: ಮಂಜು ಶ್ರೀ ಗೆಳೆಯರ ಬಳಗ ಅಲಡ್ಕ ಸಂಪಾಜೆ 10 ನೇ ವರ್ಷದ ಮಂಜು ಶ್ರೀ ಕಪ್ 2022 ಕ್ರಿಕೆಟ್ ಕೂಟ ಸಂಪಾಜೆ ಜೂನಿಯರ್ ಕಾಲೇಜ್ ಮೈದಾನದಲ್ಲಿ ಯಶಸ್ವಿಯಾಗಿ ನಡೆಯಿತು. ಕೂಟದ ಚಾಂಪಿಯನ್ ಆಗಿ ಮಾಡಾವು ತಂಡ ಹೊರಹೊಮ್ಮಿತು. ಕಲ್ಲುಗುಂಡಿ ಎಸ್. ಎಮ್. ಎಸ್. ತಂಡ ರನ್ನರ್ ಅಪ್ ಆಯಿತು. ವಿಜೇತರಿಗೆ ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ. ಕೆ. ಹಮೀದ್ ಗೂನಡ್ಕ ಪ್ರಶಸ್ತಿ ವಿತರಿಸಿದರು. ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷ ಟಿ. ಎಮ್. ಶಾಹಿದ್, ಸಜ್ಜನ ಪ್ರತಿಷ್ಠಾನದ ರಹೀಮ್ ಬೀಜದಕಟ್ಟೆ, ಗ್ರಾಮ ಪಂಚಾಯತ್ ಸದಸ್ಯರುಗಳಾದ ಎಸ್. ಕೆ. ಹನೀಫ್, ವಿಜಯ ಕುಮಾರ್ ಆಲಡ್ಕ, ಭಟ್ಟಯಪ್ಪ ಉಪಸ್ಥಿತರಿದ್ದರು.