ಕ್ರೈಂ

ಮಂಗಳೂರು : ಅಪ್ರಾಪ್ತ ಬಾಲಕಿಗೆ ಪ್ರಜ್ಞೆ ತಪ್ಪಿಸಿ ಅತ್ಯಾಚಾರ…!

913

ಮಂಗಳೂರು: ಬಾಲಕಿಗೆ ಪ್ರಜ್ಞೆ ತಪ್ಪಿಸಿ ಅತ್ಯಾಚಾರವೆಸಗಿರುವ ಆರೋಪದ ಮೇಲೆ ಹಳೆ ರೌಡಿ ಶೀಟರ್ ನನ್ನು ಮಂಗಳೂರಿನ ಪಾಂಡೇಶ್ವರ ಮಹಿಳಾ ಪೊಲೀಸರು ಪೋಕ್ಸೋ ಪ್ರಕರಣದಡಿ ಬಂಧಿಸಿದ್ದಾರೆ.

ನವೀನ್ ಸಿಕ್ವೇರ (34) ಬಂಧಿತ ಆರೋಪಿಯಾಗಿದ್ದಾನೆ. ಕಂಕನಾಡಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಳೆಯ ರೌಡಿಶೀಟರ್ ನನ್ನು ಪೊಲೀಸರು ಬಂಧಿಸಿ ವಿಚಾರಣೆ ಕೈಗೊಂಡಿದ್ದಾರೆ. ಆರೋಪಿ ನವೀನ್ ಸಿಕ್ವೇರಾ ನಿಗೆ ಸಂತ್ರಸ್ತ ಬಾಲಕಿಯ ಸಹೋದರನೊಂದಿಗೆ ಗೆಳೆತನವಿತ್ತು. ಈ ಹಿನ್ನೆಲೆ ಆರೋಪಿ ಬಾಲಕಿಯ ಮನೆಗೆ ಕೆಲವೊಮ್ಮೆ ಬಂದು ಹೋಗುತ್ತಿದ್ದ. ಇತ್ತೀಚೆಗೆ ಆರೋಪಿ ಬಾಲಕಿಯ ಮನೆಗೆ ಯಾರೂ ಇಲ್ಲದ ಸಂದರ್ಭ ಬಂದಿದ್ದು, ಈ ಸಂದರ್ಭ ಜ್ಯೂಸ್ ನಲ್ಲಿ ಅಮಲು ಪದಾರ್ಥ ಹಾಕಿ ನೀಡಿದ್ದಾನೆ. ಆಗ ಪ್ರಜ್ಞೆ ತಪ್ಪಿದ ಸ್ಥಿತಿಯಲ್ಲಿದ್ದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಪರಾರಿಯಾಗಿದ್ದಾನೆ. ಈ ಘಟನೆ ಬಗ್ಗೆ ಬಾಲಕಿ ಪೋಷಕರಿಗೆ ತಿಳಿಸಿದ್ದಾಳೆ. ಆಕೆಯ ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತನಿಖೆ ಕೈಗೊಂಡ ಪಾಂಡೇಶ್ವರ ಮಹಿಳಾ ಠಾಣೆ ಪೊಲೀಸರು ಪೊಕ್ಸೊ ಪ್ರಕರಣದಡಿ ಆರೋಪಿಯನ್ನು ಬಂಧಿಸಿ ಮುಂದಿನ ಕ್ರಮ ಜರುಗಿಸಿದ್ದಾರೆ.

See also  ಕಬಕದಿಂದ ತಡರಾತ್ರಿ ಆಲ್ಟೋ ಕಾರಿನಲ್ಲಿ ಕಿಡ್ನ್ಯಾಪ್ ವದಂತಿ, ಜಾಲ್ಸೂರು, ಸುಳ್ಯದಲ್ಲಿ ನಾಕಾಬಂದಿ ಹಾಕಿ ಕಾದ ಪೊಲೀಸರು..!
Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget