Latest

ರಾಜ್ಯದ ಅತೀ ದೊಡ್ಡ ಡ್ರಗ್ಸ್ ಪ್ರಕರಣ ಭೇದಿಸಿದ ಮಂಗಳೂರು ಸಿಸಿಬಿ ಪೊಲೀಸರು..!, ಬೆಂಗಳೂರಿನಲ್ಲಿ 75 ಕೋಟಿ ರೂ. ಮೌಲ್ಯದ 37.87 ಕೆಜಿ ಡ್ರಗ್ಸ್​ ಜಪ್ತಿ

676
Spread the love

ನ್ಯೂಸ್ ನಾಟೌಟ್: ರಾಜ್ಯದ ಇತಿಹಾಸದಲ್ಲಿ ಅತೀ ದೊಡ್ಡ ಡ್ರಗ್ಸ್ ಕಾರ್ಯಾಚರಣೆ ನಡೆದಿದೆ. ಮಂಗಳೂರು ಸಿಸಿಬಿ ಪೊಲೀಸರು ರಾಜಧಾನಿ ಬೆಂಗಳೂರಿನಲ್ಲಿ 75 ಕೋಟಿ ರೂ. ಮೌಲ್ಯದ 37.87 ಕೆಜಿ ಡ್ರಗ್ಸ್​ ಜಪ್ತಿ ಮಾಡಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿದ್ದ ವಿದೇಶಿ ಪ್ರಜೆಗಳನ್ನು ಬಂಧಿಸಿದ್ದಾರೆ. ಸಿಸಿಬಿ ಪೊಲೀಸರು ಕಳೆದ ಐದು ತಿಂಗಳಿಂದ ಕಾರ್ಯಾಚರಣೆ ನಡೆಸಿ ಡ್ರಗ್ಸ್​ ಜಾಲ ಭೇದಿಸಿದ್ದಾರೆ ಅನ್ನುವುದು ವಿಶೇಷ.

ಎಂಡಿಎಂಎ ಡ್ರಗ್ಸ್ ದೆಹಲಿಯ ಲ್ಯಾಬ್​ನಲ್ಲಿ ನಿತ್ಯ ತಯಾರಾಗುತ್ತಿತ್ತು. ವಾರಕ್ಕೊಮ್ಮೆ ಬೆಂಗಳೂರಿಗೆ ವಿಮಾನದಲ್ಲಿ ಮೂಟೆಗಟ್ಟಲೆ ಬರುತ್ತಿತ್ತು. ವಾರಕ್ಕೆ 15-30 ಕೆಜಿ ಮತ್ತು ತಿಂಗಳಿಗೆ ಕನಿಷ್ಠ 100 ಕೆಜಿ ಎಮ್​ಡಿಎಮ್​ಎ ಡ್ರಗ್ಸ್ ಬೆಂಗಳೂರಿಗೆ ಬರುತ್ತಿದೆ. ಬೆಂಗಳೂರಿನಲ್ಲಿ ತಿಂಗಳಿಗೆ ಕನಿಷ್ಠ 50-60 ಕೋಟಿ ರೂಪಾಯಿ ಡ್ರಗ್ ವಹಿವಾಟು ನಡೆಯುತ್ತದೆ ಎಂಬ ಅಂಶ ಪೊಲೀಸರ ತನಿಖೆಯಲ್ಲಿ ತಿಳಿದು ಬಂದಿದೆ. ಡ್ರಗ್ ಮಾಫಿಯಾಗೆ ದೆಹಲಿ ವಿಮಾನ ನಿಲ್ದಾಣದ ಅಧಿಕಾರಿಗಳು ಮತ್ತು ಬೆಂಗಳೂರು ವಿಮಾನ ನಿಲ್ದಾಣದ ಅಧಿಕಾರಿಗಳು ಸಾಥ್​ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

See also  43 ಪೊಲೀಸ್ ಠಾಣೆಗಳನ್ನು ಸೈಬರ್ ಅಪರಾಧ ಪೊಲೀಸ್ ಠಾಣೆಗಳೆಂದು ಮರುನಾಮಕರಣ..! ನಾಲ್ವರು ಎಸ್ಪಿಗಳು ಸೇರಿದಂತೆ 193 ಅಧಿಕಾರಿಗಳ ಹುದ್ದೆಗಳು ಮಂಜೂರು..!
  Ad Widget   Ad Widget   Ad Widget   Ad Widget   Ad Widget   Ad Widget