ಕ್ರೈಂ

ಬಸ್ ನಲ್ಲಿದ್ದ ವಿದ್ಯಾರ್ಥಿಗಳ ಮೇಲೆ ಅನೈತಿಕ ಪೋಲಿಸ್ ಗಿರಿ: ನಾಲ್ವರನ್ನು ಬಂಧಿಸಿದ ಪೊಲೀಸರು

700

ಮಂಗಳೂರು: ಬಸ್ ನಲ್ಲಿ ಮುಸ್ಲಿಂ ಯುವಕ, ಹಿಂದೂ ಯುವತಿಯ ನಡುವೆ ನಡೆಯುತ್ತಿದ್ದ ರಾಸಲೀಲೆಯನ್ನು ಪ್ರಶ್ನಿಸಿದ ವಿಚಾರವೊಂದು ಜಾಲತಾಭದಲ್ಲಿ ವೈರಲ್ ಆಗಿತ್ತು. ಈ ವಿಚಾರವಾಗಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡ ಮಂಗಳೂರು ಪೋಲಿಸರು ಯುವತಿಯ ಗೌರವಕ್ಕೆ ಧಕ್ಕೆ ತಂದ ಆರೋಪದ ಮೇಲೆ ನಾಲ್ವರನ್ನು ಬಂಧಿಸಿದ್ದಾರೆ.

ಘಟನೆಯ ಹಿನ್ನೆಲೆ :
ಮಂಗಳೂರು ನಗರದ ಸರ್ವೀಸ್ ಬಸ್ ನಿಲ್ದಾಣದಲ್ಲಿ ನಿನ್ನೆ ಖಾಸಗಿ ಬಸ್ ನಲ್ಲಿ ಮುಸ್ಲಿಂ ಯುವಕ ಮತ್ತು ಯುವತಿ ಒಂದೇ ಸೀಟ್ ನಲ್ಲಿ ಕುಳಿತು ಅಸಭ್ಯವಾಗಿ ವರ್ತಿಸಿದ್ದಳು ಎನ್ನಲಾಗಿತ್ತು. ಈ ಸಂದರ್ಭದಲ್ಲಿ ಕೆಲ ಸಾರ್ವಜನಿಕರು ಅವರ ಐಡಿ ಪ್ರೂಫ್ ಕೇಳಿ ಅವರ ಮನೆಯವರ ಬಗ್ಗೆ ವಿಚಾರಿಸಿ ಅವಾಚ್ಯ ಶಬ್ದಗಳಿಂದ ಬೈದು ಕೈಗಳಿಂದ ಹಲ್ಲೆ ನಡೆಸಿದ್ದು, ವಿಡಿಯೋ ವೈರಲ್ ಆಗಿತ್ತು. ವಿಡಿಯೋ ವೈರಲ್ ಆಗುತ್ತಿದ್ದಂತೆ ಯುವತಿಯ ಗೌರವಕ್ಕೆ ಧಕ್ಕೆ ಬರುವ ರೀತಿಯಲ್ಲಿ ವರ್ತಿಸಿದರೆಂಬ ಕಾರಣಕ್ಕೆ ಪಾಂಡೇಶ್ವರ ಠಾಣೆಯಲ್ಲಿ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.

See also  ಸುಳ್ಯ: ಸರ್ಕಾರಿ ಬಸ್ ಸ್ಟ್ಯಾಂಡ್ ಬಳಿ ಸ್ಕಿಡ್ ಆಗಿ ಸ್ಕೂಟಿ ಪಲ್ಟಿ, ಸವಾರನ ಕೈಗೆ ಗಾಯ
  Ad Widget   Ad Widget   Ad Widget   Ad Widget   Ad Widget   Ad Widget   Ad Widget