Latestಕರಾವಳಿಕ್ರೈಂಮಂಗಳೂರುವೈರಲ್ ನ್ಯೂಸ್

ಮಂಗಳೂರು: ತಂದೆ ಸೇದಿ ಎಸೆದಿದ್ದ ಬೀಡಿ ತುಂಡು ನುಂಗಿ 10 ತಿಂಗಳ ಮಗು ಸಾವು..! ಗಂಡನ ವಿರುದ್ಧ ದೂರು ನೀಡಿದ ಮಗುವಿನ ತಾಯಿ..!

614

ನ್ಯೂಸ್ ನಾಟೌಟ್: ತಂದೆ ಸೇದಿ ಎಸೆದಿದ್ದ ಬೀಡಿ ತುಂಡು ನುಂಗಿದ ಮಗು ದಾರುಣ ಸಾವಿಗೀಡಾಗಿರುವ ಘಟನೆ ಮಂಗಳೂರಿನ ಅಡ್ಯಾರ್‌ ನಲ್ಲಿ ನಡೆದಿದೆ.

ಅಡ್ಯಾರ್‌ ನಲ್ಲಿ ವಾಸಿಸುತ್ತಿದ್ದ ಬಿಹಾರ ಮೂಲದ ದಂಪತಿ ಪುತ್ರ ಅನೀಶ್‌ ಎಂಬ ಮಗು ಮೃತಪಟ್ಟಿದೆ ಎನ್ನಲಾಗಿದೆ. ಬೀಡಿ ತುಂಡು ಗಂಟಲಲ್ಲಿ ಸಿಲುಕಿಕೊಂಡು ಅಸ್ವಸ್ಥಗೊಂಡಿದ್ದ ಮಗು ಚಿಕಿತ್ಸೆ ಫಲಿಸದೇ ವೆನ್ಲಾಕ್‌ ಆಸ್ಪತ್ರೆಯಲ್ಲಿ ಸಾವನ್ನಪ್ಪಿದೆ.

ಮನೆಯ ನೆಲದಲ್ಲಿ ಬಿದ್ದಿದ್ದ ಬೀಡಿ ತುಂಡನ್ನು ಮಗು ನುಂಗಿತ್ತು. ಸ್ವಲ್ಪ ಹೊತ್ತಲ್ಲೇ ಅಸ್ವಸ್ಥಗೊಂಡ ಮಗುವನ್ನು ಮನೆಯವರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮಗು ಕೊನೆಯುಸಿರೆಳೆದಿದೆ.

ಘಟನೆಗೆ ಸಂಬಂಧಿಸಿದಂತೆ ಗಂಡನ ವಿರುದ್ಧ ಮಗುವಿನ ತಾಯಿ ಲಕ್ಷ್ಮಿ ದೇವಿ ದೂರು ನೀಡಿದ್ದಾರೆ. ಸೇದಿದ ಬೀಡಿಯ ತುಂಡನ್ನು ಮನೆಯೊಳಗೆ ಬಿಸಾಡಬೇಡಿ ಎಂದು ಎಷ್ಟು ಬಾರಿ ತಿಳಿಸಿದರೂ ಕೇಳದೇ ಮತ್ತೆ ಬಿಸಾಕಿದ್ದಕ್ಕೆ ಹೀಗಾಯಿತು ಎಂದು ಮಗುವಿನ ತಾಯಿ ರೋಧಿಸಿದ್ದಾರೆ. 

ಇರಾನ್‌ ಸರ್ಕಾರಿ ವಾಹಿನಿ ಮೇಲೆ ಬಾಂಬ್‌ ದಾಳಿ..! ಓಡಿ ಹೋದ ಲೈವ್‌ ನಲ್ಲಿದ್ದ ನಿರೂಪಕಿ..!

ಮತ್ತೊಂದು ಎರ್ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ..! ಸ್ಯಾನ್ ಫ್ರಾನ್ಸಿಸ್ಕೋದಿಂದ ಮುಂಬೈಗೆ ತೆರಳುತ್ತಿದ್ದ ಪ್ರಯಾಣಿಕರನ್ನು ಕೋಲ್ಕತ್ತಾದಲ್ಲಿ ಕೆಳಗಿಳಿಸಿದ ಸಿಬ್ಬಂದಿ..!

See also  ಮಡಿಕೇರಿ: 22 ಕೋಟಿ ವೆಚ್ಚದಲ್ಲಿ 15ಕಿ.ಮೀ ರೈಲ್ವೇ ಬ್ಯಾರಿಕೇಡ್; ಇನ್ಮುಂದೆ ರೈತರು, ಕಾರ್ಮಿಕರು ಸೇಫ್!ಆನೆ ದಾಳಿ,ಕಾಡು ಕೋಣ ಹಾವಳಿ ತಪ್ಪಿಸಲು ಹೊಸ ಪ್ಲ್ಯಾನ್!
  Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget