ಕ್ರೈಂ

ಮಂಗಳೂರು: ಒಂಟಿ ಬೈಕ್ ಗೆ ಹೊಂಚು ಹಾಕಿ ಸುಲಿಗೆ, ಮಂಗಳಮುಖಿ ಅಂದರ್

ಮಂಗಳೂರು: ಒಂಟಿ ದ್ವಿಚಕ್ರ ವಾಹನವನ್ನೇ ಟಾರ್ಗೆಟ್ ಮಾಡಿ ಸವಾರನನ್ನು ಸುಲಿಗೆ‌ ಮಾಡುತ್ತಿದ್ದ ಮಂಗಳಮುಖಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಇಜಿಪುರ ನಿವಾಸಿ ಅಭಿಷೇಕ್ ಅಲಿಯಾಸ್ ಗೊಂಬೆ ಅಲಿಯಾಸ್ ಅನಾಮಿಕ(27) ಬಂಧಿತ ಮಂಗಳಮುಖಿ.

ಮಂಗಳೂರಿನ ನಂತೂರು ಪದವು ಬಳಿಯಿರುವ ಬಿಎಸ್ಎನ್ಎಲ್ ಎಕ್ಸ್ ಚೇಂಜ್ ಬಳಿ ಗಣೇಶ್ ಶೆಟ್ಟಿ ಎಂಬವರು ಬೈಕ್ ನಲ್ಲಿ ಬರುತ್ತಿದ್ದರು. ಈ ಸಂದರ್ಭ ಈ ಮಂಗಳಮುಖಿ ರಸ್ತೆಗೆ ಅಡ್ಡವಾಗಿ ನಿಂತು ಬೈಕ್ ತಡೆದಿದ್ದಾನೆ. ಬಳಿಕ ಹತ್ತಿರ ಬಂದು ಗಣೇಶ್ ಶೆಟ್ಟಿಯವರಿಗೆ ಪೆಪ್ಪರ್ ಸ್ಪ್ರೇ ಸಿಂಪಡಿಸಿ ಅವರ ಕತ್ತಿನಲ್ಲಿದ್ದ 24 ಗ್ರಾಂ ಸರವನ್ನು ಎಗರಿಸಿದ್ದಾನೆ. ಈ ಬಗ್ಗೆ ಕದ್ರಿ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಆರೋಪಿ ಮಂಗಳಮುಖಿಯನ್ನು ಪತ್ತೆಹಚ್ಚಿರುವ ಪೊಲೀಸರು ‌ಅರೆಸ್ಟ್ ಮಾಡಿದ್ದಾರೆ. ಈತನಿಂದ 71 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡ ಪೊಲೀಸರಿಗೆ ಈತ ಇಂತಹ ಮೂರು ಕೃತ್ಯದಲ್ಲಿ ಭಾಗಿಯಾಗಿರೋದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

Related posts

‘ಗುಡ್ಡ ಜರಿದ ತಕ್ಷಣ ಇಡೀ ರಸ್ತೆಯನ್ನೇ ಬಂದ್ ಮಾಡೋದಲ್ಲ.., ಸಮಸ್ಯೆಗೆ ಮೊದ್ಲೇ ಪರಿಹಾರ ಮಾಡಬೇಕು’, ಏನಿದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿಕೆ..?

ಬೆಂಗಳೂರು ವಿವಾಹೇತರ ಸಂಬಂಧಕ್ಕೆ ಡೇಟಿಂಗ್‌ ಆಪ್‌ ಬಳಕೆಯಲ್ಲಿ ದೇಶದಲ್ಲೇ ನಂ.1..! ಇಲ್ಲಿದೆ ಸಂಪೂರ್ಣ ಮಾಹಿತಿ

ಬಿಜೆಪಿ ಸೇರಿದ ಕ್ರಿಶ್ಚಿಯನ್ನರ ಮೇಲೆ ದಾಳಿ..! ಬಿಜೆಪಿ ಸೇರ್ಪಡೆಗೊಂಡ ಅರ್ಚಕರಿಗೂ ಬೆದರಿಕೆ!?