ಕ್ರೈಂ

ಮಂಡ್ಯ: ಒಂದೇ ಕುಟುಂಬ ಐವರ ಕೊಚ್ಚಿ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

349
Spread the love

ಮಂಡ್ಯ: ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಒಂದೇ ಕುಟುಂಬದ 5 ಜನರ ಹತ್ಯೆ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್ ಸಿಕ್ಕಿದೆ.

ಮಹಿಳೆಯೋರ್ವಳು ಈ ಅಮಾನವೀಯ ಕೃತ್ಯವನ್ನು ಎಸಗಿರುವುದು ತನಿಖೆಯಿಂದ ಬಯಾಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ 26 ವರ್ಷದ ಲಕ್ಷ್ಮಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆಯಾದ ಮಹಿಳೆಯ ಪತಿ ಗಂಗಾರಾಮ್ ಮೇಲೆ ಲಕ್ಷ್ಮಿಗೆ ಪ್ರೀತಿ ಇರುತ್ತದೆ. ಗಂಗಾರಾಮನನ್ನು ಪ್ರೀತಿಸುತ್ತಿದ್ದ ಲಕ್ಷ್ಮಿ ಆತನ ಸಂಬಂಧಿಯಾಗಿದ್ದು, ತನ್ನನ್ನು ಮದುವೆಯಾಗುವಂತೆ ಪೀಡಿಸುತ್ತಿದ್ದಳು. ಆಂಧ್ರಪ್ರದೇಶದಲ್ಲಿ ವಾಸವಾಗಿದ್ದ ಹಂತಕಿ ಲಕ್ಷ್ಮಿ ಕಳೆದ ಎರಡು ತಿಂಗಳಿನಿಂದ ಮೈಸೂರಿನಲ್ಲಿ ವಾಸವಾಗಿದ್ದಳು.

ಮಂಡ್ಯ ಜಿಲ್ಲೆ ಕೆ.ಆರ್.ಎಸ್. ಠಾಣೆ ಪೊಲೀಸರು ಐವರನ್ನು ಕೊಲೆ ಮಾಡಿ ಅಮಾಯಕಿಯಂತೆ ಅಳುತ್ತಿದ್ದ ಲಕ್ಷ್ಮಿಯನ್ನು ವಿಚಾರಣೆ ನಡೆಸಿದಾಗ ಗಂಗಾರಾಮ್ ಜೊತೆ ಆಕೆಯ ಪ್ರೀತಿಯ ನಂಟು ತಿಳಿದು ಬಂದಿದೆ. ಪ್ರೀತಿಗಾಗಿಯೇ ಕೃತ್ಯವನ್ನು ನಡೆಸಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

See also  ತುರಿಮಣೆಯಿಂದ ತನ್ನಿಬ್ಬರು ಮಕ್ಕಳನ್ನು ಹೊಡೆದು ಕೊಂದ ತಾಯಿ!! 7 ಪುಟಗಳ ಡೆತ್‌ನೋಟ್ ಬರೆದಿಟ್ಟು ತಾನೂ ಐದನೇ ಮಹಡಿಯಿಂದ ಹಾರಿ ಆತ್ಮಹತ್ಯೆ
  Ad Widget   Ad Widget   Ad Widget   Ad Widget   Ad Widget   Ad Widget