ಸುಳ್ಯ

ಮಂಡೆಕೋಲಿನಲ್ಲಿ ಹಿಂದೂ ಜಾಗರಣ ವೇದಿಕೆ ನೇತೃತ್ವದಲ್ಲಿ ಬಡವರಿಗೆ ಮನೆ ನಿರ್ಮಾಣ, ನೆರವೇರಿದ ಗುದ್ದಲಿ ಪೂಜೆ

999

ಸುಳ್ಯ: ವಿಕ್ರಮ್ ಫೌಂಡೇಶನ್, ಸುಳ್ಯ ತಾಲೂಕು ಹಿಂದೂ ಜಾಗರಣ ವೇದಿಕೆ  ಮಂಡೆಕೋಲು ಘಟಕದ ಕಾರ್ಯಕರ್ತರು ಊರವರು ಹಾಗೂ ದಾನಿಗಳ ನೇತೃತ್ವದಲ್ಲಿ ಬಡ ಕುಟುಂಬಗಳಿಗೆ ಮನೆ ನಿರ್ಮಿಸಲು ಮುಂದಾಗಿದ್ದು  ಮೂರು ಮನೆಗಳಿಗೆ ಗುದ್ದಲಿಪೂಜೆ ಕಾರ್ಯಕ್ರಮ ನಡೆದಿದೆ. ವಿಕ್ರಮ್ ಫೌಂಡೇಶನ್ ನ ಸಂಸ್ಥಾಪಕರಾದ ಮಹೇಶ್ ವಿಕ್ರಮ್ ಹೆಗ್ಡೆಯವರು ಗುದ್ದಲಿಪೂಜೆ ನಡೆಸಿದರು. ಉದಯ ಆಚಾರ್ಯರ ನೇತೃತ್ವ ದಲ್ಲಿ ಪೂಜಾ ಕಾರ್ಯಕ್ರಮ ನಡೆದವು.

ಈ ಸಂದರ್ಭದಲ್ಲಿ ಹಿಂದು ಜಾಗರಣ ವೇದಿಕೆ ಸುಳ್ಯ ತಾಲೂಕು ಅಧ್ಯಕ್ಷ ಮಹೇಶ್ ಉಗ್ರಾಣಿಮನೆ, ಪಂಚಾಯತ್ ಉಪಾಧ್ಯಕ್ಷ ಅನಿಲ್ ತೋಟಪ್ಪಾಡಿ, ಪಂಚಾಯತ್ ಸದಸ್ಯೆ ಪ್ರತಿಭಾ ಭಟ್, ಬಾಲಚಂದ್ರ ದೇವರಗುಂಡ, ತಾರಾನಾಥ ಪೇರಾಲು, ದಿವ್ಯ ಲತಾ, ತಿಲಕ ಕುತ್ಯಾಡಿ, ಜಾಗರಣದ ಹಿರಿಯ ಕಾರ್ಯಕರ್ತರಾದ ಲಕ್ಷ್ಮಣ ಉಗ್ರಾಣಿಮನೆ, ಅಜಿತ್ ಬನ್ನೂರು,ವೆಂಕಟ್ರಮಣ ಅತ್ಯಾಡಿ ಹಾಗೂ ಊರವರು ಉಪಸ್ಥಿತರಿದ್ದರು.

See also  NMC ಪದವಿ ಕಾಲೇಜು ದಿನಾಚರಣೆ ಮತ್ತು ಪ್ರತಿಭಾ ಪುರಸ್ಕಾರ;ವಿದ್ಯೆಯೆಂದರೆ ಕೇವಲ ಸಾಕ್ಷಾರತೆಯಲ್ಲ,ಸಂಸ್ಕಾರ- ಎಂ.ಬಿ ಸದಾಶಿವ
  Ad Widget   Ad Widget   Ad Widget   Ad Widget   Ad Widget   Ad Widget   Ad Widget